ಹೊನ್ನಾವರ: ತಾಲೂಕಿನ 24 ಗ್ರಾಮ ಪಂಚಾಯಿತಿಗಳಲ್ಲಿ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ನಡೆಯಿತು.
ಹಳದೀಪುರ ಗ್ರಾಪಂ ಅಧ್ಯಕ್ಷರಾಗಿ ಪುಷ್ಪಾ ಮಹೇಶ, ಉಪಾಧ್ಯಕ್ಷರಾಗಿ ಅಜಿತ ನಾಯ್ಕ. ನವಿಲಗೋಣ ಗ್ರಾಪಂ ಅಧ್ಯಕ್ಷರಾಗಿ ಮಾದೇವಿ ಸುರೇಶ ನಾಯ್ಕ, ಉಪಾಧ್ಯಕ್ಷರಾಗಿ ಎನ್.ವಿ. ಸತೀಶ ಹೆಬ್ಬಾರ. ಕಡತೋಕ ಅಧ್ಯಕ್ಷ- ಸಾವಿತ್ರಿ ಕೃಷ್ಣ ಭಟ್, ಉಪಾಧ್ಯಕ್ಷ-ಲಕ್ಷ್ಮೀ ಶ್ರೀಕಾಂತ ಮಡಿವಾಳ. ಚಂದಾವರ ಅಧ್ಯಕ್ಷ- ಪ್ರೇಮಾ ಮೋಹನ ನಾಯ್ಕ, ಉಪಾಧ್ಯಕ್ಷ- ನಿರ್ಮಲಾ ಜುವಾಂವ ಡಯಾಸ. ಕಡ್ಲೆ ಅಧ್ಯಕ್ಷ- ಸುಬ್ರಹ್ಮಣ್ಯ ಭಟ್, ಉಪಾಧ್ಯಕ್ಷ-ಗಣಪತಿ ಭಾಗವತ. ಸಾಲ್ಕೋಡ ಅಧ್ಯಕ್ಷ-ಯಮುನಾ ಕೃಷ್ಣಮೂರ್ತಿ ನಾಯ್ಕ, ಉಪಾಧ್ಯಕ್ಷ- ಬಾಲಚಂದ್ರ ನಾಯ್ಕ. ಹೊಸಾಕುಳಿ ಅಧ್ಯಕ್ಷ- ಸುರೇಶ ಗಣಪತಿ ಶೆಟ್ಟಿ, ಉಪಾಧ್ಯಕ್ಷ-ಮಾದೇವಿ ಗಣಪು ಮುಕ್ರಿ. ಕರ್ಕಿ ಅಧ್ಯಕ್ಷ-ವೀಣಾ ಗಣೇಶ ಶೇಟ್, ಉಪಾಧ್ಯಕ್ಷ-ವಿನೋದ ನಾಯ್ಕ. ಮುಗ್ವಾ ಅಧ್ಯಕ್ಷ- ಐ.ವಿ. ನಾಯ್ಕ, ಉಪಾಧ್ಯಕ್ಷ-ವಿದ್ಯಾ ಉದಯ ಮೇಸ್ತ ಆಯ್ಕೆಯಾಗಿದ್ದಾರೆ.
ಮಾವಿನಕುರ್ವಾ ಗ್ರಾಪಂ ಅಧ್ಯಕ್ಷರಾಗಿ ಮಿನಿನ್ (ಪೀಟರ್) ಮೆಂಡಿಸ್, ಉಪಾಧ್ಯಕ್ಷರಾಗಿ ಸವಿತಾ ವೆಂಕಟೇಶ ನಾಯ್ಕ. ಹಡಿನಬಾಳ ಅಧ್ಯಕ್ಷ-ವೆಂಕಟೇಶ ಗೌಡ, ಉಪಾಧ್ಯಕ್ಷ-ಸುನೀತಾ ನಾಗರಾಜ ಶೇಟ್. ಚಿಕ್ಕನಕೋಡ ಅಧ್ಯಕ್ಷ-ಶ್ಯಾಮಲಾ ಜಗದೀಶ ನಾಯ್ಕ, ಉಪಾಧ್ಯಕ್ಷ- ಮಾಲಿನಿ ಪಾರ್ಶ್ವನಾಥ ಜೈನ್. ಖರ್ವಾ ಅಧ್ಯಕ್ಷ-ಶ್ರೀಧರ ನಾಯ್ಕ, ಉಪಾಧ್ಯಕ್ಷ-ಪವಿತ್ರಾ ನಾಗಪ್ಪ ಹಳ್ಳೇರ. ಜಲವಳ್ಳಿ ಅಧ್ಯಕ್ಷ- ಸುರೇಶ ವಾಮನ ನಾಯ್ಕ, ಉಪಾಧ್ಯಕ್ಷ- ಲತಾ ಮಂಜುನಾಥ ಪೂಜಾರಿ. ಹೆರಂಗಡಿ ಅಧ್ಯಕ್ಷ- ಮೇರಿ ಬನಿವಾಸ್ ಡಯಾಸ್, ಉಪಾಧ್ಯಕ್ಷ- ಲೋಕೇಶ ನಾಯ್ಕ. ಉಪ್ರೋಣಿ ಅಧ್ಯಕ್ಷ-ಗಣೇಶ ನಾಯ್ಕ, ಉಪಾಧ್ಯಕ್ಷ- ಮಾದೇವಿ ಉಪ್ಪಾರ. ನಗರಬಸ್ತಿಕೇರಿ ಅಧ್ಯಕ್ಷ- ಸುನೀತಾ ಶ್ರೀಧರ ಹೆಗಡೆ, ಉಪಾಧ್ಯಕ್ಷ-ಮಂಜುನಾಥ ನಾಯ್ಕ. ಕುದ್ರಿಗಿ ಅಧ್ಯಕ್ಷ-ಮಹಮ್ಮದ್ ಫೈಸಲ್ ಭಾವಾ, ಉಪಾಧ್ಯಕ್ಷ-ಫಿಲೋಮಿನಾ ಲಾಜರ್ ಮಿರಾಂಡಾ. ಕೊಡಾಣಿ ಅಧ್ಯಕ್ಷ- ತಿಮ್ಮಪ್ಪ ನಾಗಪ್ಪ ನಾಯ್ಕ, ಉಪಾಧ್ಯಕ್ಷ- ಸುಲೋಚನಾ ಧರ್ಮ ನಾಯ್ಕ. ಮಾಗೋಡ ಅಧ್ಯಕ್ಷ- ಶಿವರಾಮ ಹೆಗಡೆ, ಉಪಾಧ್ಯಕ್ಷ- ಜಯಂತಿ ರಾಮಕೃಷ್ಣ ನಾಯ್ಕ. ಬಳಕೂರು ಅಧ್ಯಕ್ಷ- ಭಾಗೀರಥಿ ಗೊಂಡ, ಉಪಾಧ್ಯಕ್ಷ- ಶಾಂತಿ ನಾಯ್ಕ. ಮೇಲಿನ ಇಡಗುಂಜಿ ಅಧ್ಯಕ್ಷ- ಲಕ್ಷ್ಮೀ ಅಮಕೂಸ ಗೌಡ, ಉಪಾಧ್ಯಕ್ಷ- ಗೋಪಾಲ ಜಟ್ಟಿ ನಾಯ್ಕ. ಕಾಸರಕೋಡ ಅಧ್ಯಕ್ಷ- ಮಂಕಾಳಿ ಹರಿಜನ, ಉಪಾಧ್ಯಕ್ಷ-ಗಣಪಿ ಗೌಡ. ಕೆಳಗಿನೂರು ಗ್ರಾಪಂ ಅಧ್ಯಕ್ಷರಾಗಿ ಚಿತ್ರಾಕ್ಷಿ ಹನುಮಂತ ಗೌಡ, ಉಪಾಧ್ಯಕ್ಷರಾಗಿ ಸುರೇಶ ಮಂಜು ಗೌಡ ಆಯ್ಕೆಯಾಗಿದ್ದಾರೆ.