ಹೊನ್ನಳ್ಳಿ ಗ್ರಾಮದಲ್ಲಿ ನಡೆದ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಯಲ್ಲಿ ಪುರವಂತರು ಶಸ ಹಾಕಿಸಿಕೊಂಡರು. 
ಜಿಲ್ಲೆ

ಹೊನ್ನಳ್ಳಿ ಮಲ್ಲಿಕಾರ್ಜುನ ಜಾತ್ರೆ ಸಂಪನ್ನ

ವಿಜಯಪುರ : ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಸೋಮವಾರ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಯು ಸಂಭ್ರಮದಿಂದ ನೆರೆವೇರಿತು.

ಬೆಳಗ್ಗೆ 5 ಕ್ಕೆ ವಿಶೇಷ ಪೂಜೆ, ಅಭಿಷೇಕ ಮತ್ತು ಅಲಂಕಾರಗಳು ನಡೆದವು. ಬೆಳಗ್ಗೆ 10 ಕ್ಕೆ ದೇವಸ್ಥಾನದ ಆವರಣದಲ್ಲಿ ಆಕರ್ಷಕ ಪುರವಂತಿಕೆ ಕಾರ್ಯಕ್ರಮ ಜರುಗಿತು. ಪುರುವಂತರು ತಮ್ಮ ಒಡಪುಗಳನ್ನು ಹೇಳುವುದರ ಮೂಲಕ ದೇವರಿಗೆ ಭಕ್ತಿ ಸಮರ್ಪಿಸಿದರು.

ಗ್ರಾಮದಲ್ಲಿ ಹಲವು ಪಲ್ಲಕ್ಕಿಗಳೊಂದಿಗೆ ಕೆಂಡ (ಅಗ್ಗಿ) ಹಾಯುವ ಕಾರ್ಯಕ್ರಮ ನೆರವೇರಿತು. ನಂತರ ಜಾತ್ರೆಗೆ ಬಂದ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು. ಅಕ್ಕಪಕ್ಕದ ಗ್ರಾಮಸ್ಥರು ಕೂಡಾ ಜಾತ್ರೆಗೆ ಆಗಮಿಸಿ ದರ್ಶನ ಪಡೆದರು.