ಜಿಲ್ಲೆ

ಬಿಜೆಪಿಗರು ಸುಳ್ಳು ಆರೋಪ ಮಾಡುವುದು ಕೈಬಿಡಲಿ

Davangere - Desk - Basavaraja P

ಹೊನ್ನಾಳಿ: ಬಿಜೆಪಿ ಮುಖಂಡರು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಮೊದಲು ತಮ್ಮೊಳಗಿನ ಗೊಂದಲ ಬಗೆಹರಿಸಿಕೊಳ್ಳಲಿ ಎಂದು ದಾವಣಗೆರೆ ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿನಯ್‌ಕುಮಾರ್ ಹೇಳಿದರು.

ಹರಿಹರದಿಂದ- ಹೊನ್ನಾಳಿ ತಾಲೂಕಿಗೆ ಮಂಗಳವಾರ ಪಾದಯಾತ್ರೆ ಮೂಲಕ ಆಗಮಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

ನಮ್ಮ ಪಕ್ಷ ಚುನಾವಣೆಗೆ ಮೊದಲು ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಎಲ್ಲ ಗ್ಯಾರಂಟಿಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆ ಆದರೂ ಪ್ರತಿಪಕ್ಷ ನಾಯಕರು ಆರೋಪ ಮಾಡುವುದನ್ನು ಬಿಟ್ಟಿಲ್ಲ ಎಂದರು.

ಬಿಜೆಪಿ ಮೊದಲು ಅವರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿ. ಬಳಿಕ ಬೇರೆ ಕಡೆ ಗಮನ ಹರಿಸಲಿ ಎಂದು ತಿಳಿಸಿದರು. ಪಾದಯಾತ್ರೆಗೆ ಬಿಜೆಪಿಯ ಕೆಲವರು ಭೇಷ್ ಎಂದಿದ್ದಾರೆ. ಪಕ್ಷಾತೀತವಾಗಿ ಮತ ನೀಡುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು.

ಹಿರೇಗೋಣಿಗೆರೆ ಗ್ರಾಪಂ ಅಧ್ಯಕ್ಷ ಎಂ.ವಿ. ನಾಗಪ್ಪ, ಸದಸ್ಯ ನಾಗೇಂದ್ರಪ್ಪ, ಗ್ರಾಮದ ಮುಖಂಡರಾದ ಶಿವಮೂರ್ತಪ್ಪ, ಪರಮೇಶ್ವರಪ್ಪ, ಕರಿಯಪ್ಪ, ಸುಭಾಷ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಂಜಿತ್, ಕರವೇ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಇತರರು ಇದ್ದರು.