ಜಿಲ್ಲೆ

ನೂತನ ರಥ ಲೋಕಾರ್ಪಣೆ

Davangere - Desk - Shobha Krishna Gowda

ಹೊನ್ನಾಳಿ: ತಾಲೂಕಿನ ಹಳೇ ದೇವರ ಹೊನ್ನಾಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ, ಮಾಧವ ರಂಗನಾಥಸ್ವಾಮಿ ದೇವಾಲಯದ ನೂತನ ವಿಮಾನ ಗೋಪುರದ ಕಳಸಾರೋಹಣ ಹಾಗೂ ನೂತನ ರಥ ಲೋಕಾರ್ಪಣೆ ಹಾಗೂ ವಿವಿಧ ಧಾರ್ವಿುಕ ಕಾರ್ಯಕ್ರಮ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಲಕ್ಷ್ಮೀ ಮಾಧವ ರಂಗನಾಥಸ್ವಾಮಿಗೆ ಕ್ಷೀರಾಭಿಷೇಕ, ಕಳಸಕ್ಕೆ ಅಭಿಷೇಕ ಹಾಗೂ ಲಕ್ಷ್ಮೀ ದೇವಸ್ಥಾನದ ಕಳಸಾರೋಹಣ ಮತ್ತು ಮಹಾ ಪಂಚಾಮೃತ ಅಭಿಷೇಕ, ನೂತನ ರಥಶುದ್ಧಿ, ರಥಾಂಗ ಹೋಮ, ಅಧಿದೇವತಾ ಪ್ರತ್ಯಧಿದೇವತಾ ಹೋಮ ಸೇರಿ ವಿವಿಧ ಹೋಮಗಳು ನೆರವೇರಿದವು.

ಬೆಳಗ್ಗೆ 9 ಗಂಟೆಗೆ ನೂತನ ರಥಕ್ಕೆ ಕಳಸ ಸ್ಥಾಪಿಸಿ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯನ್ನು ದಿವ್ಯ ರಥದಲ್ಲಿ ಕೂರಿಸಲಾಯಿತು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶಾಸಕ ಡಿ.ಜಿ.ಶಾಂತನಗೌಡ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಗ್ರಾಮಕ್ಕೆ ಭೆಟಿ ನೀಡಿ ದೇವರ ದರ್ಶನ ಪಡೆದರು.

ನೂತನ ರಥ ನಿರ್ವಿುಸಿಕೊಟ್ಟ ಸ್ವದೇಶಿ ಕಂಪನಿಯ ಸಿಇಒ ಕೆ.ಪ್ರವೀಣ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ನಾಗೇಂದ್ರಪ್ಪ, ಗದ್ದಿಗೆಪ್ಪ, ನಿವೃತ್ತ ಪ್ರಾಧ್ಯಾಪಕ ವರದರಾಜು, ಉಪನ್ಯಾಸಕ ಸುನಿಲ್​ಕುಮಾರ್, ಮಾದಪ್ಪ, ಹಾಲೇಶ್, ಪ್ರದೀಪ್, ಪ್ರವೀಣ್, ಶ್ರೀನಿವಾಸ್, ಪ್ರವೀಣ್, ಚಿನ್ಮಯ, ಪ್ರಧಾನ ಅರ್ಚಕ ಮಾಧವರಾವ್, ಶ್ರೀನಿವಾಸ್ ಇತರರಿದ್ದರು.

ಗ್ರಾಮಸ್ಥರು ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಿದರೆ ನಾನು ಅವರ ಜತೆ ನಿಲ್ಲುತ್ತೇನೆ. ಇದು ನಮ್ಮ ಸ್ವಗ್ರಾಮ ಆಗಿರುವುದರಿಂದ ಗ್ರಾಮದ ಸೇವೆಗೆ ಸದಾ ಸಿದ್ಧ ಎಂದು ತಿಳಿಸಿದರು.

ಧಾರ್ವಿುಕ ಕಾರ್ಯಗಳಿಗೆ ಆದ್ಯತೆ ಕೊಡಿ: ಯಾವುದೇ ಗ್ರಾಮ ಅಥವಾ ನಗರಗಳಲ್ಲಿ ಧಾರ್ವಿುಕ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಸಮಾಜಸೇವಕ ಹಾಗೂ ಸ್ವದೇಶಿ ಕಂಪನಿಯ ಸಿಇಒ ಕೆ.ಪ್ರವೀಣ್ ಹೇಳಿದರು. ನಮ್ಮ ಕುಟುಂಬದವರ ಸಹಕಾರದಿಂದ 45 ಲಕ್ಷ ರೂ.ವೆಚ್ಚದಲ್ಲಿ ನೂತನ ರಥ ಮಾಡಿಸಿಕೊಟ್ಟಿದ್ದೇನೆ. ಇದಕ್ಕೆ ಕೆಲ ಭಕ್ತರೂ ದೇಣಿಗೆ ನೀಡಿದ್ದಾರೆ. ನಾವು ದುಡಿದ ಒಂದು ಭಾಗವನ್ನು ದೇವರು ಹಾಗೂ ಸಮಾಜಕ್ಕೂ ಅರ್ಪಣೆ ಮಾಡಬೇಕು ಎಂದರು.