ಜೆ. ವರ್ಷಾ, ಕೆ.ಟಿ. ಅಪೂರ್ವ 
ಜಿಲ್ಲೆ

ವಿದ್ಯಾರ್ಥಿನಿ ವರ್ಷಾಗೆ ರಾಜ್ಯಕ್ಕೆ 8ನೇ ಸ್ಥಾನ

Davangere - Desk - Basavaraja P

ಹೊನ್ನಾಳಿ: ಪಟ್ಟಣದ ವಿಜಯ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಜೆ. ವರ್ಷಾಗೆ ಮರು ಮೌಲ್ಯಾಪನದಲ್ಲಿ 7 ಅಂಕ ಹೆಚ್ಚು ಗಳಿಸಿ ರಾಜ್ಯಕ್ಕೆ 8ನೇ ಸ್ಥಾನ ಪಡೆದು ಹೊನ್ನಾಳಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಚಾರ್ಯ ವಸಂತಕುಮಾರ್ ತಿಳಿಸಿದರು.

ವಿದ್ಯಾರ್ಥಿನಿ ವರ್ಷಾ ಇಂಗ್ಲಿಷ್ ವಿಷಯದಲ್ಲಿ ಮೊದಲು 90 ಅಂಕ ಗಳಿಸಿದ್ದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಆಗ 7 ಅಂಕ ಹೆಚ್ಚು ಪಡೆದು 97 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಸ್ಥಾನ ಲಭಿಸಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕೆ.ಟಿ. ಅಪೂರ್ವಗೆ ಕನ್ನಡದಲ್ಲಿ 97 ಅಂಕ ಬಂದಿತ್ತು. ಆ ವಿದ್ಯಾರ್ಥಿನಿಯೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ಬಳಿಕ 1 ಅಂಕ ಹೆಚ್ಚಾಗಿ 98 ಅಂಕ ಗಳಿಸಿದ್ದಾರೆ ಎಂದು ತಿಳಿಸಿದರು.

ನಮ್ಮ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸತತ 2ನೇ ಬಾರಿ ಶೇ. 100 ಫಲಿತಾಂಶ ಪಡೆದಿದ್ದಲ್ಲದೆ, ಸತತ 4ನೇ ಬಾರಿ ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ತಾಲೂಕಿನಲ್ಲೇ ಟಾಪರ್ ಸ್ಥಾನ ಕಾಯ್ದುಕೊಂಡು ಬರುತ್ತಿದೆ ಎಂದು ಹೇಳಿದರು.