ಜಿಲ್ಲೆ

ಹನಿಟ್ರ್ಯಾಪ್ ಬಲೆಗೆ ಬೆಳಗಾವಿ ಪಾಲಿಕೆ ನೌಕರ?

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಇದೀಗ ಹನಿಟ್ರ್ಯಾಪ್ ಸದ್ದು ಜೋರಾಗಿದೆ. ಇದರ ಮಧ್ಯೆ ಬೆಳಗಾವಿ ಮಹಾನಗರ ಪಾಲಿಕೆ ನೌಕರನೋರ್ವ ಹನಿಟ್ರ್ಯಾಪ್‌ಗೆ ಒಳಗಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಪಾಲಿಕೆಯ ಆರೋಗ್ಯ ವಿಭಾಗದ ನೌಕರನೊಬ್ಬನಿಗೆ ಯುವತಿ ವಾಟ್ಸಪ್ ಚಾಟಿಂಗ್‌ನಿಂದ ಪರಿಚಯವಾಗಿದ್ದಾಳೆ. ನಂತರ ಯುವತಿ ವಿಡಿಯೋ ಕಾಲ್ ಹಾಗೂ ಖಾಸಗಿ ದೃಶ್ಯ ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದಾಳಂತೆ.

ಬಳಿಕ ದುಡ್ಡು ನೀಡದಿದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆಗೆ ಹಾಕಿ ಹಂತ ಹಂತವಾಗಿ ಅಂದಾಜು 80ಸಾವಿರ ರೂ. ಹಣ ಪೋನ್ ಪೇ ಮಾಡಿಸಿಕೊಂಡು ಮತ್ತಷ್ಟು ಹಣ ನೀಡುವಂತೆ ಪೀಡಿಸಿದ್ದಾಳೆ.

ಯುವತಿ ಕಿರುಕುಳಕ್ಕೆ ಬೇಸತ್ತ ಪಾಲಿಕೆ ನೌಕರ ಯುವತಿಯ ಜತೆಗೆ ಮಾಡಿರುವ ವಿಡಿಯೋ ಕಾಲ್, ಚಾಟಿಂಗ್, ಹಣ ನೀಡಿರುವುದು ಸೇರಿ ವಿವಿಧ ದಾಖಲೆಗಳನ್ನು ಸಂಗ್ರಹಿಸಿಕೊಂಡು ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಹೇಳಿದ್ದಾನೆ. ಆದರೆ, ಯುವತಿ ಯಾರು? ಎಂಬುದನ್ನು ನೌಕರ ಬಹಿರಂಗ ಪಡಿಸಿಲ್ಲ.

ದೂರು ಕೊಟ್ಟರೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.