ಜಿಲ್ಲೆ

ಹನಿಟ್ರ್ಯಾಪ್ ತನಿಖೆ ಸಿಬಿಐಗೆ ವಹಿಸಿ

ತುಮಕೂರು: ಮಂತ್ರಿಗಳು, ಶಾಸಕರು ಸೇರಿ 48 ಪ್ರಭಾವಿಗಳನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲಾಗಿದೆ ಎಂಬ ಸಚಿವ ಕೆ.ಎನ್​.ರಾಜಣ್ಣ ವಿಧಾನಸಭೆಯಲ್ಲಿ ಹೇಳಿರುವುದು ರಾಜ್ಯದ ಇತಿಹಾಸದಲ್ಲಿಯೇ ದೊಡ್ಡ ಲೈಂಗಿಕ ಹಗರಣವಾಗಿದೆ. ಗೃಹ ಇಲಾಖೆ ಹಾಗೂ ರಾಜ್ಯ ಸರ್ಕಾರ ಸ್ವಯಂ ಪ್ರೇರಿತವಾಗಿ ದೂರ ದಾಖಲಿಸಿಕೊಂಡು ಪ್ರಕರಣವನ್ನು ಸಿಬಿಐ ಇಲ್ಲವೇ ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶಗೌಡ ಆಗ್ರಹಿಸಿದರು.

ನಗರದಲ್ಲಿ ಶನಿವಾರ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರವನ್ನು ಭದ್ರ ಪಡಿಸಿಕೊಳ್ಳಲು ಇಲ್ಲವೇ ಅಧಿಕಾರದ ಆಸೆಗೆ ಇಂತಹ ಹೀನ ಕೃತ್ಯಗಳಿಗೆ ಇಳಿದಿರುವುದು ಖಂಡನೀಯ. ಕೂಡಲೇ ಸಿಎಂ ಈ ಪ್ರಕರಣವನ್ನು ಸಿಬಿಐ ಇಲ್ಲವೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಇದರ ಜತೆಗೆ ಈ ಸಂಬಂಧ ಸದನದ ಬಾವಿಗೆ ಇಳಿದು ಪ್ರತಿಭಟಿಸಿದ 18 ಬಿಜೆಪಿ ಶಾಸಕರ 6 ತಿಂಗಳ ಅಮಾನತು ಮಾಡಿರುವ ಆದೇಶವನ್ನು ವಿಧಾನಸಭಾಧ್ಯಕ್ಷರು ಮರುಪರಿಶೀಲಿಸಬೇಕು. ಇಲ್ಲದಿದ್ದರೆ ರಾಜ್ಯದ್ಯಾಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕಾಂಗ್ರೆಸ್​ ಪಕ್ಷದ ಅಂತರಿಕ ಕಚ್ಚಾಟದ ಫಲವಾಗಿ ರಾಜ್ಯದ ಮಾನ, ಮರ್ಯಾದೆ ಹರಾಜಾಗುತ್ತಿದೆ. ಜನಪ್ರತಿನಿಧಿಗಳು ಎಂದು ಹೇಳಿಕೊಳ್ಳಲು

ಹಿಂಜರಿಯುವಂತಾಗಿದೆ. ಆಧಿವೇಶನದ ಕೊನೆಯ ದಿನ ಸಚಿವರೊಬ್ಬರ ಮೇಲಾದ ಹನಿಟ್ರ್ಯಾಪ್​ ಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿದ್ದ ವೇಳೆ ನಮ್ಮ ಪಕ್ಷದ ನಾಯಕರ ತೀಮಾರ್ನದಂತೆ ಸ್ಪೀಕರ್​ ಮುಂದೆ ಮನವಿಯನ್ನು ಸಲ್ಲಿಸಲು ಮುಂದಾಗಿದ್ದು ಸರಿಯಷ್ಟೇ. ಸ್ವೀಕರ್​ ಸ್ಥಾನದ ಮೇಲೆ ಬಿಜೆಪಿಗೆ ಅತ್ಯಂತ ಗೌರವವಿದೆ. ಹಾಗಾಗಿ ಜನಪ್ರತಿನಿಧಿಗಳಾಗಿ ನಮ್ಮ ಅಹವಾಲು ಸಲ್ಲಿಸಲು ಮುಂದಾಗಿದ್ದೆವು. ಇದನ್ನೆ ನೆಪ ಮಾಡಿಕೊಂಡು ಸ್ವೀಕರ್​ ಕಾಂಗ್ರೆಸ್​ ಏಜೆಂಟ್​ರಂತೆ ವರ್ತಿಸಿದ್ದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತದ್ದಲ್ಲ. ಪಕ್ಷ ಭೇದ ಮರೆತು ಸ್ಪೀಕರ್​ ಕೆಲಸ ಮಾಡಬೇಕಂದು ಸುರೇಶಗೌಡ ಅವರು ಆಗ್ರಹಿಸಿದರು.

ಕಾಂಗ್ರೆಸ್​ನಲ್ಲಿ ಮೂಲ ಮತ್ತು ವಲಸಿಗ ಎಂಬ ಬಣಗಳು ಹುಟ್ಟಿಕೊಂಡಿವೆ. ತಳಮಟ್ಟದಿಂದ ಪಕ್ಷ ಸಂಟಿಸಿದವರಿಗೆ ಅಧಿಕಾರ ಇಲ್ಲದಂತಾಗಿದೆ. 2006ರಲ್ಲಿ ಪಕ್ಷ ಸೇರಿದ ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದು ಇದೀಗ ಹೈಕಮಾಂಡ್​ ಸೂಚನೆ ಧಿಕ್ಕರಿಸಿ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಬೇಕೆಂದು ಒತ್ತಾಯ ಮಾಡುತ್ತಿರುವ ಸಹಕಾರ ಸಚಿವ ರಾಜಣ್ಣಗೆ ಹನಿಟ್ರ್ಯಾಪ್​ ಹಗರಣ ಮೆತ್ತಿಕೊಂಡಿದೆ. ಯತ್ನಾಳ್​ಗೆ ಚೀಟಿ ಕೊಟ್ಟವರು ಯಾರು? ರಾಜಣ್ಣ ಬೆಂಬಲಕ್ಕೆ ಸಿಎಂ ಧಾವಿಸಿಲ್ಲ. ರಾಜಣ್ಣ ಅವರೇ ಸದನದಲ್ಲಿ ಹೇಳಿರುವಂತೆ 48 ಎಂಎಲ್​ಎಗಳ ಸಿಡಿ ಇವೆ ಎಂಬ ಹಗರಣವನ್ನು ಸಿಬಿಐಗೆ ಇಲ್ಲವೇ ನ್ಯಾಯಾಂಗ ತನಿಖೆಗೆ ವಹಿಸಬೇಕು. ಸಿಐಡಿ, ಲೋಕಾಯುಕ್ತ, ಎಸ್​ಐಟಿ. ತನಿಖೆಯಿಂದ ನ್ಯಾಯ ದೊರೆಯುವ ನಿರೀಕ್ಷೆ ಇಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಗೂಳೂರು ಶಿವಕುಮಾರ್​, ಸಿದ್ದೇಗೌಡ, ವಿಜಯಕುಮಾರ್​, ಎಸ್ಸಿ ಘಟಕ ಅಧ್ಯಕ್ಷ ಅಂಜನಪ್ಪ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಚ್​.ಚೇತನ್​ ಮತ್ತಿತರರು ಹಾಜರಿದ್ದರು.

ಕುರ್ಚಿಗೆ ಅಂಟಿ ಕೂತವನಲ್ಲ !

ಸಿದ್ದಿವಿನಾಯಕ ಮಾರುಕಟ್ಟೆ ಜಾಗಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಸುಳ್ಳು ಆರೋಪ ಮಾಡಿರುವ ವ್ಯಕ್ತಿ ಬಿಜೆಪಿ ಕಾರ್ಯಕರ್ತನಲ್ಲ. 2028ರ ಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಲು ಹೊರಟಿರುವ ಗುಂಪಿನ ಸದಸ್ಯ. ನಾನು ಕುರ್ಚಿಗೆ ಅಂಟಿ ಕೂತವನಲ್ಲ.2013-, 2018, -2023 ಮೂರು ಚುನಾವಣೆಗಳಲ್ಲಿ ಕೆಲವು ಸ್ವಪಯರೇ ನನ್ನ ವಿರುದ್ಧ ಕೆಲಸ ಮಾಡಿದ್ದರು. ಈಗಲೂ ನನ್ನ ವಿರುದ್ಧ ಇಂತಹದೊಂದು ಗುಂಪು ಆಕ್ಟೀವ್​ ಆಗಿದ್ದು 2028ರ ಚುನಾವಣೆ ಗಮನದಲ್ಲಿಟ್ಟುಕೊಂಡು ಕ್ಷುಲ್ಲಕ ಆರೋಪ ಮಾಡುತ್ತಿದೆ. ಇಂತಹ ಆಧಾರರಹಿತ ಆರೋಪಗಳನ್ನು ರ್ನಿಲಕ್ಷ$್ಯ ಮಾಡುವುದಾಗಿ ಶಾಸಕ ಜಿ.ಬಿ.ಜ್ಯೋತಿಗಣೇಶ್​ ತಿಳಿಸಿದರು.