ಭಟ್ಕಳ: ತಾಲೂಕಿನ ಬೆಳೆಕೆ ಜನತಾ ಕಾಲನಿ ಸಮೀಪ ಒಂದೇ ಕುಟುಂಬದ ನಾಲ್ವರ ಮೇಲೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದ ಘಟನೆ ನಡದಿದೆ. ಹೆಜ್ಜೇನು ಕಡಿತದಿಂದ ಅಸ್ವಸ್ಥಗೊಂಡ ಗಾಯಾಳುಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಜನತಾ ಕಾಲನಿ ನಿವಾಸಿಗಳಾದ ಪರಮೇಶ್ವರಿ ಮಂಜುನಾಥ ಮೊಗೇರ, ಮಂಜುನಾಥ ಮಾಸ್ತಿ ಮೊಗೇರ, ಭರತ ರಾಮಚಂದ್ರ ಮೊಗೇರ ಎಂಬುವರಾಗಿದ್ದು, ಗಾಯಗೊಂಡ ಮತ್ತೊಬ್ಬರ ಹೆಸರು ತಿಳಿದು ಬಂದಿಲ್ಲ. ಇವರು ತಮ್ಮ ಮನೆಯ ಗೇಟ್ ಬಳಿ ನಿಂತಿದ್ದ ವೇಳೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.