ಜಿಲ್ಲೆ

ಜೇನು ಕಡಿದು ಪ್ರವಾಸಿಗ ಸಾವು

Uttara Kannada - Subash Hegde
ಗೋಕರ್ಣ: ಜೇನು ಕಡಿದು ಒಬ್ಬ ಮೃತಪಟ್ಟಿದ್ದು, ಮೂವರು ಅಸ್ವಸ್ತರಾದ ಘಟನೆ ಅಂಕೋಲಾ ಹೊಸಾಕಂಬಿ ಸಮೀಪ ಸೋಮವಾರ ನಡೆದಿದೆ.
ಹುಬ್ಬಳ್ಳಿಯಿಂದ ನಾಲ್ವರು  ಸ್ನೇಹಿತರು ಕಾರಿನಲ್ಲಿ ಹೊಸಾಕಂಬಿ ಮಾರ್ಗವಾಗಿ ಆಗಮಿಸುತ್ತಿರುವಾಗ ಜೇನು ನೊಣಗಳು ದಾಳಿ ನಡೆಸಿವೆ.  ಅಸ್ವಸ್ತನಾಗಿದ್ದ ಆದರ್ಶ ಎಂಬಾತ ಗೋಕರ್ಣ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ.
ತೀವ್ರವಾಗಿ ಅಸ್ವಸ್ತನಾಗಿರುವ ಗಗನದೀಪ ಜುಟಾಲ್ ಎಂಬಾತನನ್ನು ಅಂಕೋಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನೂ ಇಬ್ಬರಿಗೆ ಗೋಕರ್ಣ ಠಾಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.