ಮುಳಗುಂದ: ಕ್ರೀಡೆಯಲ್ಲಿ ಪ್ರಾಮಾಣಿಕತೆ ಮೆರೆದವರು ಜೀವನದಲ್ಲಿಯು ಪ್ರಾಮಾಣಿಕತೆ ಮೆರೆಯುತ್ತಾರೆ ಎಂದು ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಹೇಳಿದರು.
ಪಟ್ಟಣದ ಎಸ್‌ಜೆಜೆಎಂ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರೌಢ ಶಾಲೆಗಳ ಗದಗ ತಾಲೂಕ ಮಟ್ಟದ (ಗ್ರಾಮೀಣ ವಲಯ) ಗುಂಪು ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರ ಮಟ್ಟದ ಕ್ರೀಡಾಪಟು, ನಿವೃತ್ತ ಶಿಕ್ಷಕ ಎಸ್.ಸಿ ಭಾವಿ ಮಾತನಾಡಿ ‘ನನ್ನನ್ನು ರಾಷ್ಟ್ರ ಮಟ್ಟಕ್ಕೆ ಕರೆದೊಯ್ದ ಮಣ್ಣು ಈ ಮುಳಗುಂದದ್ದು. 1980ರಲ್ಲಿ ನನ್ನ ಕ್ರೀಡಾ ಜೀವನ ಪ್ರಾರಂಭವಾಗಿದ್ದು ಇಲ್ಲಿಯೇ. ಶ್ರದ್ಧೆಯಿಂದ ಪ್ರಾಮಾಣಿಕವಾಗಿ ಆಟವಾಡಿದರೆ ಯಶಸ್ಸು ಸಿಕ್ಕೇ ಸಿಗುತ್ತದೆ’ ಎಂದರು.
ಮುಳಗುಂದ ಅರ್ಬನ್ ಬ್ಯಾಂಕ್ ಚೇರ್ಮನ್ ಎಸ್.ಎಂ. ನೀಲಗುಂದ ಮಾತನಾಡಿದರು. ದೈಹಿಕ ಶಿಕ್ಷಣಾಧಿಕಾರಿ ಟಿ.ಎಸ್. ಪವಾರ, ಬಿ.ಎಫ್. ಪೂಜಾರ, ಎಂ.ಆರ್. ಪೂಜಾರ, ಎಫ್.ಎಂ. ಮುಶಣ್ಣವರ, ಡಾ. ಎಸ್.ಸಿ. ಚವಡಿ, ಪಿ.ಎ. ವಂಟಕರ, ಮೌಲಾಸಾಬ ಶೇಖ, ಎಸ್.ವಿ. ಗಾಳಿ, ಬಿ.ಬಿ. ಮೆಣಸಿನಕಾಯಿ, ಇತರರು ಇದ್ದರು. ಇ.ಎಂ. ಗುಳೇದಗುಡ್ಡ ಸ್ವಾಗತಿಸಿದರು. ಆರ್.ಆರ್. ಪಟ್ಟಣ ನಿರೂಪಿಸಿದರು.