ಮಡಿಕೇರಿ:
ಗೂಗಲ್‌ನಲ್ಲಿ ಕೊಡಗು ಹೋಮ್‌ಸ್ಟೇ ಎಂದು ಹುಡುಕಿದರೆ ನೂರಾರು ಹೋಮ್‌ಸ್ಟೇಗಳು ಕಂಡುಬರುತ್ತದೆ. ಆದರೆ ಇದರಲ್ಲಿ ಹೆಚ್ಚಿನವು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಆಗಿಲ್ಲ. ಮನೆ ಯಜಮಾನನೇ ಸ್ವತಃ ವಾಸವಿದ್ದು ತನ್ನಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಅತಿಥಿಗಳ ರೀತಿಯಲ್ಲಿ ಆತಿಥ್ಯ ನೀಡಬೇಕು ಎನ್ನುವುದು ಹೋಮ್‌ಸ್ಟೇ ಪರಿಕಲ್ಪನೆ. ಆದರೆ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಹೆಚ್ಚಿನ ಹೋಮ್ ಸ್ಟೇಗಳ ಮಾಲೀಕರು ದೂರದಲ್ಲಿ ಎಲ್ಲೋ ಇದ್ದುಕೊಂಡು ಇಲ್ಲಿ ಕೆಲಸದವರ ಮುಖಾಂತರ ಆತಿಥ್ಯದ ಮನೆಗಳನ್ನು ನಡೆಸುತ್ತಿದ್ದಾರೆ. ಇಂಥ ಹೋಮ್‌ಸ್ಟೇಗಳಲ್ಲಿ ಬಹುತೇಕವು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಕೂಡ ಆಗಿರುವುದಿಲ್ಲ.
ಅನಧಿಕÊತ ಹೋಮ್‌ಸ್ಟೇಗಳಿಂದ ತೆರಿಗೆ ಸೋರಿ ಹೋಗುತ್ತಿದೆ. ಪ್ರವಾಸಿಗರಿಗೆ ಸಂಬAಧಿಸಿದ ದಾಖಲೆಗಳೂ ಸಿಗುತ್ತಿಲ್ಲ. ಸÀರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ತೆರಿಗೆ ಕಟ್ಟಿ, ಮೂಲಭೂತ ಸೌಕರ್ಯಗಳಿಗೆ ವಾಣಿಜ್ಯ ಬಳಕೆಯ ಶುಲ್ಕ ಪಾವತಿಸಿ ಅಧಿಕÊತವಾಗಿ ಕಾರ್ಯಾಚರಿಸುತ್ತಿರುವ ರೆಸಾರ್ಟ್, ಲಾಡ್ಜ್, ಹೊಟೇಲ್‌ಗಳಿಗೂ ಹೊಡೆತ ಬೀಳುವಂತಾಗಿದೆ. ಹಾಗಾಗಿ ಕೊಡಗಿನಲ್ಲಿ ಸಕರಾತ್ಮಕ ಪ್ರವಾಸೋದ್ಯಮಕ್ಕೆ ಅನುಕೂಲವಾಗಲು ಹೋಮ್‌ಸ್ಟೇಗಳನ್ನು ಶಿಸ್ತುಬದ್ಧ ವ್ಯವಸ್ಥೆಗೆ ಒಳಪಡಿಸಬೇಕು ಎನ್ನುವ ಆಗ್ರಹಗಳು ಕೇಳಿಬರುತ್ತಿದೆ.
ಈ ನಿಟ್ಟಿನಲ್ಲಿ ಹೋಮ್‌ಸ್ಟೇಗಳ ನೋಂದಣಿಗೆ ಜಿಲ್ಲಾಡಳಿತ ಸೂಚಿಸಿದರೂ ಸೂಕ್ತ ಪ್ರತಿಕ್ರಿಯೆ ಸಿಗುತ್ತಿಲ್ಲ. ನೋಂದಣಿ ಪ್ರಕ್ರಿಯೆ ಸುಲಭವಾಗಿಲ್ಲ ಎನ್ನುವ ಆರೋಪಗಳೂ ಇವೆ. ಹಾಗಾಗಿ ಹೋಮ್‌ಸ್ಟೇ ನೀತಿಯೊಂದರ ಅಗತ್ಯತೆಯ ಬಗ್ಗೆಯೂ ಒತ್ತಾಯಗಳು ಕೇಳಿಬರುತ್ತಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಲೌಡ್‌ಸ್ಪೀಕರ್‌ನಲ್ಲಿ ವಿಜಯವಾಣಿ ಓದುಗರು ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಕೊಡಗಿನಲ್ಲಿ ಅನಧಿಕೃತ ಹೋಂಸ್ಟೇಗಳ ಸಂಖ್ಯೆ ಜಾಸ್ತಿ ಇದೆ. ಹೋಂ ಸ್ಟೇಗಳ ಮೇಲೆ ನಿಗಾ ವಹಿಸದೆ ಹೋದರೆ ಮುಂದಿನ ದಿನಗಳಲ್ಲಿ ಭಾರೀ ಅಪಾಯ ಎದುರಾಗುವ ಸಾಧ್ಯತೆ ಇರುವ ಕಾರಣ ಜಿಲ್ಲಾಡಳಿತ ಅನಧಿಕೃತ ಹೋಂ ಸ್ಟೇಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು
ಸುನೀತಾ ಮಂಜುನಾಥ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು, ಸಿದ್ದಾಪುರ
ಕೊಡಗಿನ ಪ್ರವಾಸಿತಾಣಗಳನ್ನು ಸಕಲ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಇವತ್ತು ಜಿಲ್ಲೆಯ ಬಹಳಷ್ಟು ಪ್ರವಾಸಿತಾಣಗಳಲ್ಲಿ ಹೇಳುವವರು, ಕೇಳುವವರು ಇಲ್ಲದಾಗಿದೆ. ಜತೆಗೆ ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳೇ ಕೊರತೆ ಕಾಣುತ್ತಿದೆ. ಅಧಿಕಾರಿಗಳು ಇತ್ತ ಗಮನಹರಿಸಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಬೇಕಾಗಿದೆ. ಪ್ರವಾಸೋದ್ಯಮಕ್ಕೆ ಒಂದು ಶಿಸ್ತು ರೂಢಿಸುವ ಅಗತ್ಯತೆ ಇದೆ
ಅಪ್ಸಲ್, ಸಾಮಾಜಿಕ ಕಾರ್ಯಕರ್ತ, ಸಿದ್ದಾಪುರ
ಜಿಲ್ಲೆಯಲ್ಲಿ ಬಹಳಷ್ಟು ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿದೆ. ಪ್ರವಾಸಿಗರಿಗೆ ಇದರಿಂದ ಅನುಕೂಲ ಆಗುತ್ತಿದೆ. ಹಾಗೆಯೇ ಸ್ಥಳೀಯರೂ ಆದಾಯ ಗಳಿಸುತ್ತಿದ್ದಾರೆ. ಆದರೆ ಕೆಲವು ಅನಧಿಕೃತ ಹೋಂಸ್ಟೇಗಳಿAದ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ. ಜಿಲ್ಲಾಡಳಿತ ಇವರ ಮೇಲೆ ಗಮನ ಹರಿಸಬೇಕು. ಪ್ರವಾಸಿಗರಿಗೆ ತೊಂದರೆ ಆಗದ ರೀತಿ ನೋಡಿಕೊಳ್ಳಬೇಕು.
ನಾಟೋಳಂಡ ಗಿರೀಶ್, ಗೋಣಿಕೊಪ್ಪ ನಿವಾಸಿ
ಅನಧಿಕೃತ ಹೋಂಸ್ಟೇಗಳಿಗೆ ಕಡಿವಾಣ ಅತ್ಯಗತ್ಯ. ಈ ನಿಟ್ಟಿನಲ್ಲಿ ಶಿಸ್ತು ತರಲು ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆಯ ಮುಖಾಂತರ ಈಗಾಗಲೇ ಜಾರಿಯಲ್ಲಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಬೇಕು. ಭೂ ಪರಿವರ್ತಿತ ಜಮೀನಿನಲ್ಲಿ ನೋಂದಣಿ ಕಡ್ಡಾಯಗೊಳಿಸಲಿ.
ಹನೀಫ್, ಗ್ರಾ. ಪಂ. ಸದಸ್ಯ, ಬ್ಯಾಡಗೊಟ್ಟ
ಕೊಡಗಿನ ಪ್ರವಾಸೋದ್ಯಮದಲ್ಲಿ ಹೋಂ ಸ್ಟೇ ಗಳ ಪಾತ್ರ ಮಹತ್ವದ್ದು. ಹೊರ ರಾಜ್ಯ ಹೊರ ಜಿಲ್ಲೆಯ ಪ್ರವಾಸಿಗರು ಹೆಚ್ಚಾಗಿ ಹೋಂಸ್ಟೇಗಳಿಗೆ ಬಂದು ತಮ್ಮ ದೈಹಿಕ , ಮಾನಸಿಕ ನೋವನ್ನು ಮರೆಯುವುದರೊಂದಿಗೆ ಸ್ಥಳೀಯರಿಗೆ ಉತ್ತಮ ಆದಾಯ ನೀಡುತ್ತಿದ್ದಾರೆ. ಆದರೆ ಕೆಲವು ಕಡೆ ಅನಧಿಕೃತ ಹೋಂಸ್ಟೇಗಳ ಸಂಖ್ಯೆಯೇ ಜಾಸ್ತಿ ಇದ್ದು ರಾತ್ರಿಯ ಸಮಯ ಪ್ರವಾಸಿಗರು ಮೋಜು ಮಸ್ತಿ ಮಾಡುತ್ತ ಸ್ಥಳೀಯರಿಗೆ ತೊಂದರೆ ನೀಡುತ್ತಿದ್ದಾರೆ. ಆದರಿಂದ ಎಲ್ಲಾ ಹೋಂ ಸ್ಟೇ ಗಳನ್ನು ಜಿಲ್ಲಾಡಳಿತದ ವತಿಯಿಂದ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು.
ಗಾಯಿತ್ರಿ ಕೆ. ಪಿ., ಉಪನ್ಯಾಸಕಿ, ವಿರಾಜಪೇಟೆ
ಅನಧಿಕೃತ ಹೋಂ ಸ್ಟೇಗಳಿಗೆ ಕಡಿವಾಣ ಹಾಕಬೇಕಾಗಿದೆ. ಅನಧಿಕೃತ ಹೋಂ ಸ್ಟೇಗಳು ಕಾನೂನು ಪಾಲಿಸುತ್ತಿಲ್ಲ. ಜಿಲ್ಲೆಯ ಪ್ರವಾಸೋದ್ಯಮದ ಮೇಲೂ ಇದರಿಂದ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಹೊರಗಿನವರಿಗೆ ಕೊಡಗು ಮೋಜು ಮಸ್ತಿಯ ತಾಣದಂತೆ ಕಾಣುತ್ತಿದೆ. ಕಂಡ ಕಂಡಲ್ಲಿ ಹೋಂ ಸ್ಟೇ ಗಳು ತಲೆ ಎತ್ತುತ್ತಿದ್ದು ಪರಿಸರಕ್ಕೂ ಧಕ್ಕೆ ಉಂಟಾಗುತ್ತಿದೆ. ಕೊಡಗಿನ ಸಂಸ್ಕೃತಿಗೆ ಹಾಗೂ ಹೋಂ ಸ್ಟೇ ಸಮೀಪ ಇರುವ ನಿವಾಸಿಗಳಿಗೂ ತೊಂದರೆ ಆಗುತ್ತಿದೆ .ಆದರಿಂದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
ರಾಜೇಶ್ ಬಿ.ಪಿ., ಉದ್ಯಮಿ, ವಿರಾಜಪೇಟೆ.
ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ಭವಿಷ್ಯವಿದೆ. ಇದನ್ನು ಸಾಕಾರಗೊಳಿಸಲು ಪ್ರವಾಸೋದ್ಯಮದಲ್ಲಿ ಇನ್ನಷ್ಟು ಶಿಸ್ತು ತರಲು ಜಿಲ್ಲೆಯ ಆಡಳಿತ ವಿಭಾಗ ಗಮನಹರಿಸಬೇಕಿದೆ. ವಿಶೇಷವಾಗಿ ಅನಧಿಕೃತ ಹೋಂ ಸ್ಟೇ ಗಳ ಬಗ್ಗೆ ಮಾಹಿತಿ ಸಂಗ್ರಹ ಮತ್ತು ಕ್ರಮ ಕೈಗೊಳ್ಳುವ ಕೆಲಸವಾಗಬೇಕಿದೆ ಈ ಕೆಲಸವನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಡಿಸುವ ಮೂಲಕ ಅನಧಿಕೃತ ಹೋಂ ಸ್ಟೇಗಳನ್ನು ಗುರುತಿಸಬೇಕಿದೆ. ಇದಕ್ಕಾಗಿ ಪಿಡಿಒಗಳಿಗೆ ಜವಾಬ್ದಾರಿ ನೀಡಬೇಕು.
ಧನಂಜಯ ಅಗೋಳಿಕಜೆ, ಅಧ್ಯಕ್ಷ, ವಿಎಸ್‌ಎಸ್‌ಎನ್, ಮದೆನಾಡು ಗ್ರಾಮ
ಕೊಡಗಿನಲ್ಲಿ ಹೋಂಸ್ಟೇಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಪ್ರೋತ್ಸಾಹ ನೀಡಬೇಕು. ಎಷ್ಟೋ ಕುಟುಂಬಗಳು ಹೋಂ ಸ್ಟೇ ನಂಬಿಕೊAಡಿವೆ. ನೋಂದಣಿ ಕಡ್ಡಾಯದೊಂದಿಗೆ ನಿಯಮಗಳನ್ನು ಸರಳೀಕರಣಗೊಳಿಸಬೇಕು. ಶುಲ್ಕ ಕಡಿಮೆ ಮಾಡಬೇಕು. ಅನಧಿಕೃತ ಹೋಂಸ್ಟೇಗಳಿಗೆ ಕಡಿವಾಣ ಹಾಕಬೇಕು.
ದುಶ್ಯಂತ್ ಕುಮಾರ್, ಕೃಷಿಕ, ಗಣಗೂರು ಗ್ರಾಮ
ಕೊಡಗು ಜಿಲ್ಲೆಯಲ್ಲಿ 2003ರಲ್ಲಿ ಹೋಂಸ್ಟೇಗಳ ಪರಿಕಲ್ಪನೆ ಆರಂಭವಾಯಿತು. ಜಿಲ್ಲೆಯಲ್ಲಿ 2200 ಕ್ಕೂ ಹೆಚ್ಚು ಹೋಂಸ್ಟೇಗಳು ನೋಂದಣಿಯಾಗಿದ್ದು, ಹೋಂಸ್ಟೇಗಳಿಗೆ ಒಂದು ನೀತಿ ಜಾರಿಗೊಳಿಸಬೇಕು. ಅನಧಿಕೃತ ಹೋಂಸ್ಟೇಗಳು ಹೆಸರು ನೋಂದಣಿಗೆ ಮುಂದಾಗಲು ಹೆಚ್ಚಿನ ಉತ್ತೇಜನ ನೀಡಬೇಕು.
ಮೋಂತಿ ಗಣೇಶ್, ಅಧ್ಯಕ್ಷೆ, ಕೊಡಗು ಹೋಮ್ ಸ್ಟೇ ಅಸೋಸಿಯೇಷನ್
ಹೋಂಸ್ಟೇಗಳಿಗೆ ಸಂಬAಧಿಸಿದAತೆ ಒಂದು ನೀತಿ ಬೇಕಿದೆ ಎಂದು ಹಲವು ದಶಕಗಳಿಂದ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಮುಂದಿನ ಕ್ಯಾಲೆಂಡರ್ ವರ್ಷದ ಆರಂಭದಲ್ಲಿಯೇ ಹೋಂಸ್ಟೇಗಳಿಗೆ ಹೊಸ ನೀತಿಯನ್ನು ಸರ್ಕಾರ ಘೋಷಿಸಲಿದೆ. ಮಾಲೀಕರು ವಾಸಿಸುವ ಸ್ಥಳದಲ್ಲಿಯೇ ಹೋಂಸ್ಟೇಗಳು ಇರುವುದರಿಂದ ಅವುಗಳ ನಿರ್ವಹಣೆ, ನೋಂದಣಿ ಪ್ರಕ್ರಿಯೆ, ಎನ್‌ಒಸಿ ಪಡೆಯುವುದು ಮತ್ತಿತರ ಮಾರ್ಗಸೂಚಿಯನ್ನು ಹೊಸ ಹೋಂಸ್ಟೇ ನೀತಿಯಲ್ಲಿ ಪ್ರಕಟಿಸಲಾಗುವುದು.
ಡಾ. ಕೆ.ವಿ. ರಾಜೇಂದ್ರ, ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರ