ಜಿಲ್ಲೆ

ಮನೆಗೆ ನೀರು ಹೊಡೆಯುತ್ತಿದ್ದ ಯುವಕ ವಿದ್ಯುತ್​ ತಗುಲಿ ಸಾವು

Haveri - Kariyappa Aralikatti

ಹಾವೇರಿ: ನಿಮಾರ್ಣ ಹಂತದ ಕಟ್ಟಡಕ್ಕೆ ನೀರು ಹೊಡೆಯುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ವಿದ್ಯುತ್​ ತಗುಲಿ ಯುವಕನೊಬ್ಬ ಮೃತಪಟ್ಟ ಘಟನೆ ಇಲ್ಲಿಯ ಉದಯ ನಗರದಲ್ಲಿ ನಡೆದಿದೆ.

ಮಂಜುನಾಥ ಶಂಭುಲಿಂಗಪ್ಪ ದೊಡ್ಡಗೌಡ್ರ (18) ಮೃತ ಯುವಕ.

ಈತ ತಮ್ಮ ನಿಮಾರ್ಣ ಹಂತದ ಕಟ್ಟಡಕ್ಕೆ ನೀರು ಹೊಡೆಯುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ವಿದ್ಯುತ್​ ತಗುಲಿ ಮೃತಪಟ್ಟಿದ್ದಾನೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.