ಜಿಲ್ಲೆ

ಮನೆ ಗೋಡೆ ಕುಸಿದು ಬಿದ್ದು ಮಹಿಳೆ ಸಾವು

Haveri - Kariyappa Aralikatti

ಹಾನಗಲ್ಲ: ಮಳೆಯಿಂದ ಮನೆ ಗೋಡೆ ಕುಸಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಟನೆ ತಾಲೂಕಿನ ಕಿರವಾಡಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಗ್ರಾಮದ ಶಾಂತಮ್ಮ ಗುಡ್ಡಪ್ಪ ತಳವಾರ (55) ಮೃತ ಮಹಿಳೆ.

ಇವರು ಮನೆ ಹಿಂಭಾಗದಲ್ಲಿ ಬಟ್ಟೆ ತೊಳೆಯುತ್ತಿದ್ದ ಸಮಯದಲ್ಲಿ ಮಳೆಯಿಂದ ನೆನೆದಿದ್ದ ಮನೆ ಗೋಡೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.