ಜಿಲ್ಲೆ

ಶ್ರಮದಾನದಿಂದ ಮನೆ ದುರಸ್ತಿ

ಸೌಮ್ಯ ಆರ್

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಕಾಡಬೆಟ್ಟು ಮಿತ್ತಟ್ಟು ಕಂದಾಡಿಯ ಸುಂದರಿಯವರಮನೆಯನ್ನು ಶ್ರಮದಾನದ ಮೂಲಕ ದುರಸ್ತಿ ಮಾಡಲಾಯಿತು.

ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯನಂದ ಪಿ., ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತುಂಗಪ್ಪ ಬಂಗೇರ, ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಚಂದಪ್ಪ ಕುಲಾಲ್ ಭೇಟಿ ನೀಡಿ ಶ್ರಮದಾನವನ್ನು ಪ್ರೋತ್ಸಾಹಿಸಿದರು.

ಮನೆ ರಿಪೇರಿಗೆ ಬೇಕಾದ ಸಹಕಾರವನ್ನು ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಸಂಪತ್ ಶೆಟ್ಟಿ, ಮಹಾಬಲ ರೈ, ಪ್ರವೀಣ್, ನಾರಾಯಣ್ ಶೆಟ್ಟಿ ಒದಗಿಸಿದ್ದು, ಶೌರ್ಯ ತಂಡದ ಸಂಯೋಜಕಿ ರೇಖಾ ಪಿ, ಘಟಕ ಪ್ರತಿನಿಧಿ ಪ್ರವೀಣ್, ಸದಸ್ಯರಾದ ಸಂಪತ್ ಶೆಟ್ಟಿ, ರಮೇಶ, ಶಶಿಕಲಾ, ಪವಿತ್ರ ಮದ್ವ, ಲಕ್ಷ್ಮಣ್, ಅಶೋಕ್ ಬೋಲ್ಮಾರು, ಅಶೋಕ ಹಾರದ್ದು, ನಾರಾಯಣ್ ಶೆಟ್ಟಿ, ರಮೇಶ್, ವಿನೋದ್, ಪ್ರಿಯಾಂಕ, ಮೋಹನಂದ, ಆನಂದ, ರೋಹಿತ್, ಪ್ರಮೀಳ, ಸ್ಥಳೀಯರಾದ ಸುಂದರ ಮೂಲ್ಯ, ಸುನೀತಾ ಮೊದಲಾದವರು ಭಾಗವಹಿಸಿದ್ದರು.