ಜಿಲ್ಲೆ

ಬೆಲೆ ಏರಿಕೆಗೆ ಹೊಸ ಕಾರಣ ಹೇಳಿದ ಗೃಹ ಸಚಿವ

ಚಿಕ್ಕಬಳ್ಳಾಪುರ:ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಉಚಿತ ಸವಲತ್ತುಗಳಿಂದ ಜನರು ನೆಮ್ಮದಿಯಾಗಿದ್ದಾರೆ. ಬಿಜೆಪಿಯನ್ನು ಬಿಟ್ಟು ಜನರಿಂದ ಎಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ? ಎಂದು ಗೃಹ ಸಚಿವ ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಒಳ್ಳೆಯ ಆಡಳಿತ ನೀಡುತ್ತಿದೆ. ಸುಮ್ಮನೆ ನಿಂಟುವಿನಲ್ಲಿರುವ ಜನಾಕ್ರೋಶವನ್ನು ಬಿಜೆಪಿ ಬಳಸಿದರೆ ಏನು ಅರ್ಥ ಇರುವುದಿಲ್ಲ. ಯಾವ ಹೆಣ್ಣು ಮಕ್ಕಳು ಉಚಿತ ಸಾರಿಗೆ ಬಸ್ ಪ್ರಯಾಣ ಬೇಡ ಎನ್ನುತ್ತಿದ್ದಾರೆ?. ಗೃಹಲಕ್ಷಿ$್ಮ ಹಣವನ್ನು ಪಡೆಯುತ್ತಿಲ್ಲವೇ?. ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಸಿಗುತ್ತಿಲ್ಲವೇ? ಎಂದು ಪ್ರಶ್ನೆಗಳ ಸುರಿಮಳೆಗೈದರು.
ಕೇಂದ್ರ ಸರ್ಕಾರದ ತೆರಿಗೆ ನೀತಿಗಳಿಂದ ರಾಜ್ಯಗಳು ಅನಿವಾರ್ಯವಾಗಿ ಕೆಲ ವಸ್ತು ಇಲ್ಲವೇ ಸೇವೆಗಳ ಬೆಲೆ ಏರಿಸಬೇಕಾದ ಪರಿಸ್ಥಿತಿ ಬಂದಿದೆ. ಕರ್ನಾಟಕಕ್ಕೆ ಜಿಎಸ್ಟಿ ಪಾಲು ಸೂಕ್ತ ಪ್ರಮಾಣದಲ್ಲಿ ಸಿಗುತ್ತಿಲ್ಲ. ಭದ್ರ ಮೇಲ್ದಂಡೆ ಯೋಜನೆಯನ್ನು ಘೋಷಿಸಿ ಅನುದಾನ ನೀಡುತ್ತಿಲ್ಲ. ಹೇಗಾದರೂ ಹೊಂದಾಣೆ ಮಾಡಿಕೊಳ್ಳಲು ಹೇಳುತ್ತಿದೆ. ಅಸಲಿಗೆ ಬಿಜೆಪಿ ವಿರುದ್ಧವೇ ಜನಾಕ್ರೋಶ, ಕಾಂಗ್ರೆಸ್ ಪರ ಒಲವಿದೆ. ಆದರೆ, ನಕಾರಾತ್ಮಕತೆಯನ್ನು ಹೋರಾಟದ ಹೆಸರಿನಲ್ಲಿ ಸಕಾರಾತ್ಮಕವನ್ನಾಗಿಸಿಕೊಳ್ಳಲು ರಾಜ್ಯ ಬಿಜೆಪಿ ನಾಯಕರು ಕಸರತ್ತು ನಡೆಸುತ್ತಿದ್ದಾರೆ ಎಂದರು.
 
*ಎಚ್ಡಿಕೆ ಟಚ್ ಮಾಡಲು ಆಗಲ್ಲ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟಚ್, ಟಾರ್ಗೆಟ್ ಮಾಡಲು ಆಗಲ್ಲ. ಅವರು ದೇಶದಲ್ಲಿನ ಬೃಹತ್ ಕೈಗಾರಿಕೆಗಳನ್ನು ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಕೇಂದ್ರ ಸರ್ಕಾರವು ಪ್ರಭಾವಿ ಖಾತೆಯನ್ನು ನೀಡಿದೆ. ಇಂತಹವರನ್ನು ಸಾಮಾನ್ಯರನ್ನಾಗಿ ಪರಿಗಣಿಸಲು ಸಾಧ್ಯವೇ? ಎಂದು ಗೃಹ ಸಚಿವರು ವ್ಯಂಗ್ಯವಾಡಿದರು.