ಜಿಲ್ಲೆ

ಪರಶುರಾಮ ಮನೆಗೆ ಗೃಹ ಸಚಿವ ಪರಮೇಶ್ವರ ಭೇಟಿ

ಕೊಪ್ಪಳ: ಅನುಮಾನಾಸ್ಪದವಾಗಿ ಮೃತಪಟ್ಟ ಯಾದಗಿರಿ ಪಿಎಸ್ಐ ಪರಶುರಾಮ ಮನೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಭೇಟಿ ನೀಡಿ ಸಾಂತ್ವಾನ ಹೇಳಿದರು.

ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ನಿವಾಸಕ್ಕೆ ಆಗಮಿಸಿದ ಪರಮೇಶ್ವರ, ಪರಶುರಾಮ ಪತ್ನಿ ಶ್ವೇತಾ ಹಾಗೂ ಪಾಲಕರನ್ನು ಭೇಟಿ ಮಾಡಿದರು. ಘಟನೆ ಕುರಿತು ಕುಟುಂಬದವರಿಂದ ಮಾಹಿತಿ ಪಡೆದುಕೊಂಡರು.

ಪಿಎಸ್ಐ ಪತ್ನಿ ಶ್ವೇತಾ, ತಾಯಿ ಗಂಗಮ್ಮ, ತಂದೆ ಜನಕಮುನಿ ಹಾಗೂ ಸಹೋದರರು ತಮಗಾದ ಅನ್ಯಾಯ ಬಗ್ಗೆ ದುಃಖ ತೋಡಿಕೊಂಡರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಹುಬ್ಬಳ್ಳಿ ಶಾಸಕ ಅಬ್ಬಯ್ಯ ಪ್ರಸಾದ ಹಾಗೂ ಸ್ಥಳೀಯ ನಾಯಕರು ಭಾಗಿಯಾಗಿದರು.