ಮಂಗಳೂರು: ನಗರದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಸೆ.2 ರಂದು ನಡೆಯುವ ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸುವ ಹಿನ್ನೆಲೆಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಗುರುವಾರ ಮಧ್ಯಾಹ್ನ ಮೈದಾನಕ್ಕೆ ಭೇಟಿ ನೀಡಿ ಕೈಗೊಳ್ಳಲಾದ ವ್ಯವಸ್ಥೆ ಪರಿಶೀಲಿಸಿದರು.
ಈ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವರು, ಪ್ರಧಾನಿಯವರು ಬಂದು ವಾಪಸ್ ಹೋಗುವವರೆಗೆ ಪೂರ್ಣ ರೂಪದ ಭದ್ರತೆ ಮಾಡಲಾಗಿದೆ. ಡಿಜಿಪಿ ಮತ್ತು ಎಡಿಜಿಪಿಯವರು ಭದ್ರತೆ ವ್ಯವಸ್ಥೆ ನೋಡಿಕೊಳ್ಳುತ್ತಾರೆ. 100 ಜನ ಉನ್ನತ ಪೊಲೀಸ್ ಅಧಿಕಾರಿಗಳು ಸಹಿತ ಒಟ್ಟಾರೆ ಮೂರು ಸಾವಿರ ಪೊಲೀರ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದರು.
ಸುಮಾರು 2000 ಸಾವಿರ ಸಿವಿಲ್ ಪೊಲೀಸರನ್ನು ಭದ್ರತೆಗೆ ನೇಮಿಸಲಾಗಿದೆ.
ಕೆಎಸ್ಸಾಆರ್‌ಪಿ, ಸಿಎಆರ್, ಎಎನ್‌ಎಫ್, ಆರ್ ಎಎಫ್, ಕೋಸ್ಟಲ್ ಸೆಕ್ಯೂರಿಟಿ, ಐಎಸ್‌ಡಿ ಹಾಗೂ ಗರುಡ ಪಡೆ ಇರುತ್ತೆ . ಉಸ್ತುವಾರಿ ಸಚಿವ ಸುನಿಲ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಮಂಗಳೂರು ಪೊಲೀಸ್ ಕಮೀಶನರ್ ಎನ್.ಶಶಿಕುಮಾರ್ ಉಪಸ್ಥಿತರಿದ್ದರು.