ಜಿಲ್ಲೆ

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡಲೇ ರಾಜೀನಾಮೆ ನೀಡಿಲಿ: ವಿ.ಶೈಲೇಂದ್ರ ಒತ್ತಾಯ

ಮೈಸೂರು: ಕರ್ನಾಟಕ ರಾಜ್ಯದಲ್ಲಿ ಎರಡುವರೆ ವರ್ಷಗಳಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಮೈಸೂರು ನಗರ ಎಸ್ ಸಿ,ಮೋರ್ಚಾ ಅಧ್ಯಕ್ಷರು ಹಾಗೂ ಮಾಜಿ ಉಪ ಮೇಯರ್ ವಿ.ಶೈಲೇಂದ್ರ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಒಂದಲ್ಲ ಒಂದು ಘಟನೆಗಳು ನಡೆಯುತ್ತಿದೆ,ಆದರೂ ಸಹ ಕರ್ನಾಟಕದಲ್ಲಿ ಗೃಹ ಇಲಾಖೆ ಕುಂಭಕರ್ಣ ನಿದ್ದೆಯಲ್ಲಿ ಜಾರಿದೆ ಎಂದು ಲೇವಾಡಿ ಮಾಡಿದರು,

ಶಾಂತಿಪ್ರಿಯ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚಿಗೆ ಕೊಲೆ ಸುಲಿಗೆ ಅತ್ಯಾಚಾರ ಡ್ರಗ್ ಮಾಫಿಯಾ ಇನ್ನೂ ಇತರ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗಿಟ್ಟಿರುವುದು ಕೈ ಕನ್ನಡಿಯಂತೆ ಸಾರ್ವಜನಿಕರಿಗೆ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು ಮೈಸೂರು ನಗರದಲ್ಲಿ ವಾರಕ್ಕೊಮ್ಮೆ ಇಂತಹ ಘಟನೆಗಳು ನಡೆಯುತ್ತಲೇ ಇವೆ, ಇದಕ್ಕೆ ಮೈಸೂರಿನ ಪೊಲೀಸ್ ಇಲಾಖೆಯ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ದಸರಾದ ಹಬ್ಬದ ವೇಳೆ ಕಲ್ಬುರ್ಗಿಯಿಂದ ತಮ್ಮ ಕುಟುಂಬದ ಸಮೇತ ಬಲೂನ್ ವ್ಯಾಪಾರಕ್ಕೋಸ್ಕರ ಬಂದಂತ 10 ವರ್ಷದ ಅಪ್ರಪ್ತ ಬಾಲಕಿಯನ್ನು ಅಪಹರಿಸಿ ವಸ್ತು ಪ್ರದರ್ಶನದ ಬಳಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಈ ಮೂಲಕ ಆಗ್ರಹಿಸಿದರು, ಸಂಸತ್ರ

ಬಾಲಕಿಯನ್ನು ಕಳೆದುಕೊಂಡ ಕುಟುಂಬಸ್ಥರಿಗೆ ಸರ್ಕಾರ ಕೂಡಲೇ 10 ಲಕ್ಷ ರೂಪಾಯಿಗಳನ್ನು ಪರಿಹಾರವನ್ನು ನೀಡಬೇಕೆಂದು ಈ ಮೂಲಕ ಆಗ್ರಹಿಸಿದರು.

ಕೆಲವು ದಿನಗಳ ಹಿಂದೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ದಾಳಿಕೋರರು ದಾಳಿ ನಡೆಸಿದರು ನಂತರ ಕ್ಯಾತಮ ನಹಳ್ಳಿಯ ಬಳಿ ಕೊಲೆ ನಡೆದಿದೆ ನಂತರ ಹಿಂದಿನ ವಾರ ವಸ್ತುಪ್ರದರ್ಶನದ ಬಳಿ ಹಳೆ ದ್ವೇಷದ ಮತ್ತೊಂದು ಕೊಲೆಯಾಗಿದೆ, ಹೀಗೆ ಮೈಸೂರಿನಲ್ಲಿ ಎರಡುವರೆ ವರ್ಷಗಳಿಂದ ಒಂದಲ್ಲ ಒಂದು ರೀತಿ ಇಲ್ಲಿ ಕೊಲೆ ಸುಲಿಗೆ ಅತ್ಯಾಚಾರಗಳನ್ನು ನಡೆಯಲು ಕಾರಣವಾಗಿರುವ ಹಾಗೂ ಗೃಹ ಇಲಾಖೆಯನ್ನು ಮುನ್ನಡೆಸಲು ವಿಫಲವಾಗಿರುವ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು

ಕೆಲವು ತಿಂಗಳಗಳ ಹಿಂದೆ ಬೆಂಗಳೂರಿನ DJ ಹಳ್ಳಿ KJ ಹಳ್ಳಿಗಳ ದುರ್ಘಟನೆಗಳೇ ಗೃಹ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ ಮೈಸೂರು ಜಿಲ್ಲೆಯಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆದರೆ ರಾಜ್ಯದ ಇತರ ಜಿಲ್ಲೆಗಳ ಕಾನೂನು ಸುವ್ಯವಸ್ಥೆ ಹೇಗಿದೆ ಎಂದು ಆಲೋಚನೆ ಮಾಡಬೇಕಾಗುತ್ತದೆ. ಮೈಸೂರು ನಗರ ಪ್ರವಾಸಿ ಕೇಂದ್ರವಾಗಿರುವುದರಿಂದ ದೇಶ ವಿದೇಶಗಳಿಂದ ಬರುವ ಪ್ರವಾಸಿಗರು ಬರುವುದಕ್ಕೆ ಭಯಪಡುವಂಥಾಗಿದೆ, ಇಂತಹ ಸ್ಥಿತಿ ಮೈಸೂರಿನಲ್ಲಿ ನಿರ್ಮಾಣವಾದರೆ. ಮೈಸೂರು ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೇರ ಕಾರಣರಾಗುತ್ತಾರೆ ಎಂದು ಆರೋಪಿಸಿದರು,

ಇದೇ ರೀತಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ ವಾದರೆ ಪ್ರತಿ ಜಿಲ್ಲೆಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.