ಕಣಬರ್ಗಿಯಲ್ಲಿ ಸಚಿವ ಸುರೇಶ ಅಂಗಡಿ ಅವರು ಅಂಗವಿಕಲ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದರು. ಶಾಸಕ ಅನಿಲ ಬೆನಕೆ, ಭೈರಗೌಡ ಪಾಟೀಲ, ಮುರುೇಂದ್ರಗೌಡ ಪಾಟೀಲ, ಅರುಣಕುಮಾರ್ ಎಂ.ಜಿ. ಇತರರು ಇದ್ದರು. 
ಜಿಲ್ಲೆ

ಮನೆ ಬಿಟ್ಟು ಯಾರೂ ಹೊರಗೆ ಬರಬೇಡಿ

ಬೆಳಗಾವಿ: ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರ ಲಾಕ್‌ಡೌನ್ ೋಷಿಸಿದ್ದರಿಂದ ಬಡವರು, ಕಾರ್ಮಿಕರು ಆಹಾರಕ್ಕಾಗಿ ಸಮಸ್ಯೆ ಎದುರಿಸಬಾರದೆಂಬ ಉದ್ದೇಶದಿಂದ ಮನೆ ಮನೆಗೆ ತೆರಳಿ ಆಹಾರ ಸಾಮಗ್ರಿ ಕಿಟ್ ನೀಡಲಾಗುತ್ತಿದೆ. ಹೀಗಾಗಿ ಯಾರೂ ಮನೆ ಬಿಟ್ಟು ಹೊರಗೆ ಬರಬೇಡಿ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ನಗರದ ಕಣಬರ್ಗಿಯಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಶಾಖೆಯ ಮತ್ತು ದಾನಿಗಳ ಸಹಯೋಗದಿಂದ 37 ಅಂಗವಿಕಲ ಬಡ ಕುಟುಂಬಗಳಿಗೆ ಬುಧವಾರ ಆಹಾರ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು. ಲಾಕ್‌ಡೌನ್‌ನಿಂದ ತೀವ್ರ ತೊಂದರೆ ಅನುಭವಿಸುತ್ತಿರುವ ಅಂಗವಿಕಲ ಬಡ ಕುಟುಂಬಗಳನ್ನು ಗುರುತಿಸಿ ಸಂಸ್ಥೆಯು ಅಕ್ಕಿ, ಗೋಧಿ ಹಿಟ್ಟು, ತೊಗರಿಬೇಳೆ, ಸಕ್ಕರೆ, ಉಪ್ಪು, ಎಣ್ಣೆ, ಖಾರದಪುಡಿ, ಚಹಾ ಪುಡಿ ಇತ್ಯಾದಿ ಸಾಮಗ್ರಿ ನೀಡಲಾಗುತ್ತಿದೆ. ಕರೊನಾ ವೈರಸ್ ನಾಶವಾಗಬೇಕಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ. ಅನವಶ್ಯಕವಾಗಿ ಯಾರಾದರೂ ಹೊರಗೆ ಬಂದಿದ್ದು ಕಂಡರೆ ಅವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಹೀಗಾಗಿ ಕೇಂದ್ರ ಸರ್ಕಾರ ಪ್ರತಿ ಕುಟುಂಬಕ್ಕೂ ಆಹಾರ ಧಾನ್ಯ ಒದಗಿಸುತ್ತಿದೆ ಎಂದರು.

ಶಾಸಕ ಅನಿಲ ಬೆನಕೆ, ಸಮೃದ್ಧಿ ಸೇವಾ ಸಂಸ್ಥೆಯ ಮುಖ್ಯಸ್ಥ ವೀರೇಶ ಕಿವುಡ ಸನವರ್, ಪಾಲಿಕೆಯ ಮಾಜಿ ಸದಸ್ಯ ಭೈರಗೌಡ ಪಾಟೀಲ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮುರುೇಂದ್ರಗೌಡ ಪಾಟೀಲ, ಸಂಸ್ಥೆಯ ಬೆಳಗಾವಿ ವಿಭಾಗದ ಮುಖ್ಯಸ್ಥ ಅರುಣಕುಮಾರ್ ಎಂ.ಜಿ. ಇತರರು ಈ ಸಂದರ್ಭದಲ್ಲಿ ಇದ್ದರು.