ಜಿಲ್ಲೆ

ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ

ಪ್ರಶಾಂತ ಹೂಗಾರ

ರಾಯಬಾಗ: ಮಕ್ಕಳ ವಿದ್ಯಾಭ್ಯಾಸ ಪ್ರಗತಿಗೆ ತಾಯಂದಿರು  ಪ್ರೋತ್ಸಾಹ ನೀಡಬೇಕು ಎಂದು ಚಿಕ್ಕೋಡಿ ಉಪನಿರ್ದೇಶಕರ ಕಚೇರಿ ಆಂಗ್ಲ ಭಾಷಾ ಪರಿವೀಕ್ಷಕಿ ಎಂ.ಬಿ.ಶಿಂಧೆ ಹೇಳಿದರು.

ಬಾವನಸೌಂದತ್ತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಾಯಂದಿರ ಸಭೆಯನ್ನು ಆಂಗ್ಲ ಭಾಷಾ ಪರಿವೀಕ್ಷಕಿ ಎಂ.ಬಿ.ಶಿಂಧೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. ಪ್ರೇರಣಾ ಪಾಟೀಲ, ಸುಭಾಷ ವಲ್ಯಾಪುರೆ, ಎಂ.ಎನ್.ತಾಶೇವಾಲೆ, ಅರುಣ ಸಲಗರೆ, ಡಿ.ಆರ್. ಬೆಂಡೆ ಇತರರಿದ್ದರು.

ತಾಲೂಕಿನ ಬಾವನಸೌಂದತ್ತಿ ಗ್ರಾಮದ ಬಾಜೀರಾವ ಮಗದುಮ್ಮ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳ ತಾಯಂದಿರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆಯಾಗಿದ್ದು, ತಾಯಿಯೇ ಮೊದಲ ಗುರು. ಆದ್ದರಿಂದ ಮನೆಯಲ್ಲಿ ಅಧ್ಯಯನಕ್ಕೆ ಪೂರಕವಾದ ವಾತಾವರಣ ನಿರ್ಮಿಸಿಕೊಡಬೇಕು ಎಂದರು.

ಅಧ್ಯಕ್ಷತೆ ವಹಿಸಿ ಪ್ರೇರಣಾ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸಂಸ್ಥೆಗೆ ಕೀರ್ತಿ ತರಬೇಕು ಎಂದರು. ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುಭಾಷ ವಲ್ಯಾಪುರೆ, ಶಿಕ್ಷಕ ಡಿ.ಆರ್.ಬೆಂಡೆ, ಸಿಆರ್‌ಪಿ ಎಂ.ಎನ್.ತಾಶೇವಾಲೆ, ಮುಖ್ಯಶಿಕ್ಷಕ ಅರುಣ ಸಲಗರೆ, ಟಿ.ಡಿ.ಮಂಗಸೂಳೆ, ಪ್ರೀತಿ ಚಿಕಲಿ,ಪಿ.ಎಸ್.ಪಂಚಾಕ್ಷರಿ ಇತರರಿದ್ದರು.