ಬೆಳಗಾವಿ ತಾಲೂಕಿನ ಹಂದಿಗನೂರು ಗ್ರಾಪಂ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಗ್ರಾಮಸಭೆಯಲ್ಲಿ ಪಿಡಿಒ ಲೀಲಾ ಮೇತ್ರಿ ಮಾತನಾಡಿದರು. ಮಂಜುನಾಥ ಪಾಟೀಲ ಇತರರಿದ್ದರು. 
ಜಿಲ್ಲೆ

ಮನೆ ಮನೆಗೆ ಶುದ್ಧ ಕುಡಿಯುವ ನೀರು

Belagavi

ಬೆಳಗಾವಿ: ಜಿಪಂ ಹಾಗೂ ಜಲ ಜೀವನ ಮಿಷನ್ ವತಿಯಿಂದ ಗ್ರಾಮದ ಎಲ್ಲ ಕುಟುಂಬಗಳಿಗೆ ನಲ್ಲಿ ಮೂಲಕ ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು.

ಸಾರ್ವಜನಿಕರು ನೀರು ಮಿತವಾಗಿ ಬಳಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪಿಡಿಒ ಲೀಲಾ ಮೇತ್ರಿ ಹೇಳಿದ್ದಾರೆ. ತಾಲೂಕಿನ ಹಂದಿಗನೂರು ಗ್ರಾಪಂ ಕಚೇರಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಜಿಪಂ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ ಹಾಗೂ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಜಲ ಶಕ್ತಿ ಮಂತ್ರಾಲಯ 2024ರ ವೇಳೆಗೆ ಗ್ರಾಮೀಣ ಕುಟುಂಬಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಒದಗಿಸುವ ಗುರಿ ಹೊಂದಿದ್ದು, ರಾಜ್ಯ ಸರ್ಕಾರ 2023ರ ಒಳಗಾಗಿ ರಾಜ್ಯದ ಎಲ್ಲಾ ಗ್ರಾಮ, ಜನವಸತಿಗಳಲ್ಲ್ಲಿನ ಕುಟುಂಬಗಳಿಗೆ ಕಾರ್ಯಾತ್ಮಕ ನಲ್ಲಿ ಸಂಪರ್ಕ ಕಲ್ಪಿಸಬೇಕಿದೆ.

ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ.75ರಷ್ಟು ಹಾಗೂ ಗ್ರಾಪಂ 15 ಶೇ. ರಷ್ಟು ಹಣ ವಿನಿಯೋಗಿಸುತ್ತಿದ್ದು, ಸಮುದಾಯ ಈ ಯೋಜನೆಯಲ್ಲಿ ಶೇ.10 ವಂತಿಗೆ ನೀಡಬೇಕಿದೆ ಎಂದರು. ಜಿಪಂ ಎಸ್ ಡಬ್ಲೂ ಎಂ ಜಿಲ್ಲಾ ಸಂಯೋಜಕ ಮಂಜುನಾಥ ಪಾಟೀಲ ಸೇರಿ ಹಂದಿಗನೂರ ಗ್ರಾಪಂ ಮಾಜಿ ಸದಸ್ಯರು, ಕುರಿಹಾಳ ಮತ್ತು ಜೋಡಕೆನಟ್ಟಿ ಗ್ರಾಮಸ್ಥರು ಇದ್ದರು.