ಉಡುಪಿ: ಪೊಲೀಸ್ ಸಿಬ್ಬಂದಿಯಂತೆಯೇ ಗೃಹರಕ್ಷಕ ದಳದ ಸಿಬ್ಬಂದಿ ಬಂದೋಬಸ್ತ್ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ, ಅವರಿಗೆ ಸರ್ಕಾರಿ ಸೌಲಭ್ಯಗಳು ಇಲ್ಲ. ಹೀಗಾಗಿ ಪೊಲೀಸ್ ನೇಮಕಾತಿ ಸಂದರ್ಭದಲ್ಲಿ ಗೃಹರಕ್ಷಕರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಡಾ. ರೋಷನ್ಕುಮಾರ್ ಶೆಟ್ಟಿ ಆಶಯ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಾರ್ಷಿಕ ವೃತ್ತಿಪರ ಕ್ರೀಡಾಕೂಟದ ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
- ದೈಹಿಕ ಕ್ಷಮತೆ: ಕೊಲ್ಲೂರಿನ ಉದ್ಯಮಿ ಧೀರಜ್ ಹೆಜಮಾಡಿ ಮಾತನಾಡಿ, ಕ್ರೀಡೆಯಿಂದ ದೈಹಿಕ ಕ್ಷಮತೆ, ಆರೋಗ್ಯ ಲಭಿಸುತ್ತದೆ. ಗ್ರಹರಕ್ಷಕರೂ ಸಹ ಒತ್ತಡದಲ್ಲಿ ಕೆಲಸ ಮಾಡುವವರಾಗಿದ್ದಾರೆ. ಹೀಗಾಗಿ ಇಂತಹ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಒತ್ತಡದಿಂದ ಹೊರಬರಲು ಸಾಧ್ಯ ಎಂದರು.
ಕ್ರೀಡಾಕೂಟದ ವಿವಿಧ ವಿಭಾಗದಲ್ಲಿ ವಿಜೇತರಾದ ಗೃಹರಕ್ಷಕರಿಗೆ ಪ್ರಶಸ್ತಿ ಪತ್ರ, ಮೆಡಲ್ ಹಾಗೂ ಶೀಲ್ಡ್ ನೀಡಿ ಗೌರವಿಸಲಾಯಿತು. ಬಹುಮಾನ ವಿತರಣಾ ಪಟ್ಟಿಯನ್ನು ಸೌಮ್ಯಾ ವಾಚಿಸಿದರು.ಜಿಲ್ಲಾ ಗೃಹರಕ್ಷಕ ದಳದ ಸೆಕೆಂಡ್ ಇನ್ ಕಮಾಂಡೆಂಟ್ ಕೆ.ಸಿ. ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗೃಹರಕ್ಷಕ ಅಧೀಕ್ಷಕ ರತ್ನಾಕರ್ ಎಂ. ಉಪಸ್ಥಿತರಿದ್ದರು.
ಟಕದ ಗೃಹರಕ್ಷಕಿಯರಾದ ಜಯಂತಿ ಹಾಗೂ ಮಮತಾ ಪ್ರಾರ್ಥಿಸಿದರು. ಬೈಂದೂರು ಟಕದ ಪ್ಲಟೂನ್ ಕಮಾಂಡರ್ ರಾವೇಂದ್ರ ಎನ್. ಸ್ವಾಗತಿಸಿದರು. ಬ್ರಹ್ಮಾವರ ಟಕದ ಪ್ಲಟೂನ್ ಕಮಾಂಡರ್ ಸ್ಟೀವನ್ ಪ್ರಕಾಶ್ ನಿರೂಪಿಸಿದರು. ಉಡುಪಿ ಟಕದ ಸೆಕ್ಷನ್ ಲೀಡರ್ ದಿನೇಶ್ ವಂದಿಸಿದರು.