ಸಿಂಗಾಪುರ ಗ್ರಾಮದ ಲಕ್ಷ್ಮಮ್ಮ ಅವರಿಗೆ ಪೊಲೀಸ್ ಸಿಬ್ಬಂದಿ ನಗದು ಹಾಗೂ ಬೆಳ್ಳಿ ಬಳೆಗಳನ್ನು ಹಿಂದಿರುಗಿಸಿದರು. ಪಿಎಸ್‌ಐ ಅಜಯ್, ಗೃಹರಕ್ಷಕ ದಳದ ಸಿಬ್ಬಂದಿ ವಸಂತ ಬಾಬು ಇದ್ದರು.  
ಜಿಲ್ಲೆ

ಪ್ರಾಮಾಣಿಕತೆ ಪ್ರದರ್ಶಿಸಿದ ಗೃಹರಕ್ಷಕ ದಳದ ಸಿಬ್ಬಂದಿ

ಹೊಳೆನರಸೀಪುರ: ಎಪಿಎಂಸಿ ಮಾರುಕಟ್ಟೆಗೆ ಕೊಬ್ಬರಿ ನೋಂದಣಿ ಮಾಡಿಸಲು ಬಂದಿದ್ದ ವೇಳೆ 6800 ರೂ. ನಗದು ಮತ್ತು 2 ಬೆಳ್ಳಿ ಬಳೆ ಕಳೆದುಕೊಂಡಿದ್ದ ತಾಲೂಕಿನ ಕಸಬಾ ಹೋಬಳಿ ಸಿಂಗಾಪುರ ಗ್ರಾಮದ ಲಕ್ಷ್ಮಮ್ಮ ಅವರಿಗೆ ನಗದು ಮತ್ತು ಬಳೆಯನ್ನು ಹಿಂದಿರುಗಿಸಲಾಯಿತು.

ಮಾ.4 ರಂದು ಲಕ್ಷ್ಮಮ್ಮ ಮಾರುಕಟ್ಟೆಗೆ ಬಂದಿದ್ದು, ಈ ವೇಳೆ ನಗದು ಹಾಗೂ ಬೆಳ್ಳಿ ಬಳೆಗಳನ್ನು ಕಳೆದುಕೊಂಡಿದ್ದರು. ಈ ಸಂದರ್ಭ
ಕರ್ತವ್ಯದಲ್ಲಿದ್ದ ಗೃಹರಕ್ಷಕ ದಳದ ಸಿಬ್ಬಂದಿ ವಸಂತಬಾಬು ಅವರಿಗೆ ಸಿಕ್ಕಿದ್ದು, ಬಳಿಕ ಅದನ್ನು ಠಾಣೆಗೆ ಒಪ್ಪಿಸಿದ್ದರು. ಬಳಿಕ ಮಾಹಿತಿ ಖಚಿತಪಡಿಸಿಕೊಂಡ ಪಿಎಸ್‌ಐ ಅಜಯ್, ಲಕ್ಷ್ಮಮ್ಮ ಅವರನ್ನು ಠಾಣೆಗೆ ಕರೆಸಿ ವಸ್ತುಗಳನ್ನು ಹಿಂದಿರುಗಿಸಿದರು.

ಗೃಹರಕ್ಷಕ ದಳದ ಸಿಬ್ಬಂದಿ ವಸಂತ್ ಬಾಬು ಅವರ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತವಾಯಿತು.