ಗೊರೇಬಾಳದಲ್ಲಿ ಆಯೋಜಿಸಿದ್ದ ತವರಿನ ತೇರು ಕಾರ್ಯಕ್ರಮದಲ್ಲಿ ತವರು ಮನೆ ಮಹಿಳೆಯರ ಮೆರವಣಿಗೆ ನಡೆಯಿತು. 
ಜಿಲ್ಲೆ

ತವರಿನ ಋಣಭಾರದ ನೆನಪು ಸದಾ ಇರಲಿ

Kopala - Desk - Eraveni

ಗೊರೇಬಾಳ: ಗ್ರಾಮದಲ್ಲಿ ಶರಣಬಸವೇಶ್ವರ 45ನೇ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ತವರಿನ ತೇರು ಕಾರ್ಯಕ್ರಮ ಜರುಗಿತು.

ಗ್ರಾಮದ ತವರಿನ ಮಹಿಳೆಯರಿಗೆ ಉಡಿತುಂಬಿ, ಶಿವ ವೃತ್ತದಿಂದ ಶರಣಬಸವೇಶ್ವರ ದೇವಾಲಯದವರೆಗೆ ಮೆರವಣಿಗೆ ನಡೆಸಿ ಪುಷ್ಪ ವೃಷ್ಠಿ ಸುರಿಸಲಾಯಿತು.
ಸಿರಗುಪ್ಪದ ಬಸವಭೂಷಣ ಸ್ವಾಮೀಜಿ ಮಾತನಾಡಿ, ತವರಿನ ತೇರು ಆಚರಣೆಯಿಂದ ಕುಟುಂಬಗಳಲ್ಲಿ ಹೊಂದಾಣಿಕೆ ಭಾವ ಮೂಡುತ್ತದೆ.

ತವರಿನ ಋಣಭಾರದ ಫಲ ತುಂಬಿದ ಶುಭ ಘಳಿಗೆಯ ನೆನಪು ಸದಾ ತುಂಬಿರಲಿ ಎಂದು ಹಾರೈಸಿದರು. ಒಳಬಳ್ಳಾರಿ ವಿರಕ್ತ ಮಠದ ಸಿದ್ಧಲಿಂಗ ಸ್ವಾಮೀಜಿ, ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ವಿರೂಪಾಕ್ಷ ಶಿವಾಚಾರ್ಯರು, ಪ್ರಭು ನೀಲಕಂಠೇಶ್ವರ ಸ್ವಾಮೀಜಿ, ಅಭಿನವ ಚನ್ನಬಸವ ಸ್ವಾಮೀಜಿ, ನೀಲಕಂಠಯ್ಯ ತಾತ, ಶಿವಬಸವ ದೇವರು ಇದ್ದರು.