ಹೊರ್ತಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ಅಣ್ಣು ಪೂಜಾರಿ, ಜಯಶ್ರೀ ಬೋಸಗಿ, ಬಸವರಾಜ ಪತ್ತಾರ, ರಾಜಕುಮಾರ ಪತ್ತಾರ, ಹಣಮಂತ ಬಡಗೇರ, ರವಿ ಸೋನಾರ ಇತರರಿದ್ದರು. 
ಜಿಲ್ಲೆ

ವಾಸ್ತು ಶಾಸದ ಪಿತಾಮಹನಿಗೆ ನಮನ

ಹೊರ್ತಿ: ವಿಶ್ವಕರ್ಮರು ವಿಶ್ವದ ಸಕಲ ಸೃಷ್ಟಿಕರ್ತರು, ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದವರು. ಸ್ವರ್ಗದಲ್ಲಿ ದೇವತೆಗಳಿಗೆ ಅರಮನೆ ನಿರ್ಮಿಸಿದವರು. ದೇವರ ಆಯುಧಗಳು, ವಾಹನಗಳ ನಿರ್ಮಾತೃ ಕೂಡ ವಿಶ್ವಕರ್ಮರಾಗಿದ್ದು, ವಾಸ್ತು ಶಾಸದ ಪಿತಾಮಹರೆಂದು ಪರಿಗಣಿಸಲಾಗಿದೆ ಎಂದು ಪಿಕೆಪಿಎಸ್​ ಕಾರ್ಯ ನಿರ್ವಾಹಕ ಅಣ್ಣು ಪೂಜಾರಿ ಹೇಳಿದರು.

ಗ್ರಾಮದ ನಿಂಬಾಳ ರಸ್ತೆಯಲ್ಲಿರುವ ವಿಶ್ವಕರ್ಮ ವೃತ್ತದಲ್ಲಿ ಮಂಗಳವಾರ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಜಯಶ್ರೀ ಬೋಸಗಿ ಮಾತನಾಡಿದರು. ವಿಶ್ವಕರ್ಮ ಭಾವಚಿತ್ರವನ್ನು ಗ್ರಾಮದ ರೇವಣಸಿದ್ಧೇಶ್ವರ ದೇವಸ್ಥಾನದಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣೆಗೆ ಮಾಡಲಾಯಿತು.

ವಿಶ್ವಕರ್ಮ ಸಮಾಜ ಅಧ್ಯ ಬಸವರಾಜ ಪತ್ತಾರ, ಉಪಾಧ್ಯ ರಾಜಕುಮಾರ ಪತ್ತಾರ, ಮಲ್ಲಿಶಿ ಪತ್ತಾರ, ರಾಮಣ್ಣ ಪತ್ತಾರ, ಅರಚಪ್ಪ ಪತ್ತಾರ, ಸಿದ್ದಪ್ಪ ಪತ್ತಾರ, ಅಣ್ಣಪ್ಪ ಪತ್ತಾರ, ಹಣಮಂತ ಬಡಗೇರ, ಕಾಶಿನಾಥ ಬಡಗೇರ, ಕಾಳಪ್ಪ ಪತ್ತಾರ, ರವಿ ಸೋನಾರ ಹಾಗೂ ಸಮಾಜ ಬಾಂಧವರು ಇದ್ದರು.