ಕೊಳ್ಳೇಗಾಲ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಯುರೋ ಕಿಡ್ಸ್ ಪ್ರೀ ಸ್ಕೂಲ್‌ನಲ್ಲಿ ಸೋಮವಾರ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ಶಿಕ್ಷಕರು ಪರಸ್ಪರ ಬಣ ಬಳಿದುಕೊಂಡು ಸಂಭ್ರಮಿಸಿದರು. 
ಜಿಲ್ಲೆ

ಯುರೋ ಕಿಡ್ಸ್ ಪ್ರೀ ಸ್ಕೂಲ್‌ನಲ್ಲಿ ಹೋಳಿ ಸಂಭ್ರಮ

ನಾಗೇಶ ಎಸ್

ಕೊಳ್ಳೇಗಾಲ: ಪಟ್ಟಣದ ಬಸವೇಶ್ವರ ನಗರದಲ್ಲಿರುವ ಯುರೋ ಕಿಡ್ಸ್ ಪ್ರೀ ಸ್ಕೂಲ್‌ನಲ್ಲಿ ಸೋಮವಾರ ಮಕ್ಕಳು ಪರಸ್ಪರ ಬಣ್ಣ ಬಳಿದುಕೊಂಡು ಹೋಳಿ ಹಬ್ಬವನ್ನು ಆಚರಣೆ ಮಾಡಿದರು.

ಮಕ್ಕಳಿಗೆ ಪಾಠ ಪ್ರವಚನ ಜತೆಗೆ ಹೋಳಿ ಹಬ್ಬದ ಆಚರಣೆ ಮಹತ್ವದ ತಿಳಿಸಲು ಯುರೋ ಕಿಡ್ಸ್ ಪ್ರೀ ಸ್ಕೂಲ್‌ನಲ್ಲಿ ಆಯೋಜಿಸಲಾಗಿತ್ತು. ಮಕ್ಕಳು ನಾನಾ ರೀತಿಯ ಬಣ್ಣಗಳನ್ನು ಕೈಯಲ್ಲಿ ಅಂಟಿಸಿಕೊಂಡು ತಮ್ಮ ಸ್ನೇಹಿತರಿಗೆ ಹಚ್ಚಿ ಸಂಭ್ರಮಿಸಿದರು. ಶಿಕ್ಷಕರು ಮಕ್ಕಳಿಗೆ ನೃತ್ಯವನ್ನು ಹೇಳಿಕೊಟ್ಟರು. ನೃತ್ಯ, ಬಣ್ಣಗಳ ಜತೆ ಮಕ್ಕಳು ಆಡುತ್ತ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲೆ ರಾಜೇಶ್ವರಿ ನಾರಾಯಣ್, ಉಪ ಪ್ರಾಂಶುಪಾಲೆ ರಮಿತಾ, ಆಡಳಿತಾಧಿಕಾರಿ ಸುಮನ್ ಎಸ್.ಓಲೇಟಿ, ಶಿಕ್ಷಕರಾದ ಸೌಜನ್ಯಾ, ಪ್ರೀತು, ಸಹನಾ ಇದ್ದರು.