ಮೈಸೂರು: ಒಳಮೀಸಲಾತಿ ಜಾರಿಯಾಗುವವರೆಗೂ ವಿವಿಧ ಇಲಾಖೆಗಳಲ್ಲಿ ನೀಡುತ್ತಿರುವ ಬಡ್ತಿಯನ್ನು ತಡೆಹಿಡಿಯಬೇಕು ಎಂದು ಸಾಮಾಜಿಕ ನ್ಯಾಯಪರ ವೇದಿಕೆ ಅಧ್ಯಕ್ಷ ಮರಡಿಪುರ ರವಿಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.
ಕೂಡಲೇ ನಾಗಮೋಹನ್‌ದಾಸ್ ಆಯೋಗದ ಸಲಹೆಯಂತೆ ಪರಿಶಿಷ್ಟ ಜಾತಿ ಸಮೀಕ್ಷೆ ಮುಗಿಸಬೇಕು. ಪರಿಶಿಷ್ಟ ಜಾತಿಯಲ್ಲಿ 101 ಉಪಜಾತಿಗಳಲ್ಲಿದು,್ದ ಅವುಗಳಿಗೆ ಸೂಕ್ತ ಪ್ರಾತಿನಿಧ್ಯ ದೊರೆಯಬೇಕು. ಜೂನ್ ಮೊದಲ ವಾರದಲ್ಲಿ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ವರುಣಾ ಕ್ಷೇತ್ರದ ವಾಜಮಂಗಲ ಗ್ರಾಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದವರನ್ನು ಕೂಡಲೇ ಬಂಧಿಸಿ ಸೂಕ್ತ ಶಿಕ್ಷೆ ವಿಧಿಸಬೇಕು. ಇನ್ನೂ ಮುಂದೆ ಇಂಥ ಘಟನೆಗಳು ರಾಜ್ಯದಲ್ಲಿ ನಡೆಯದಂತೆ ಸರ್ಕಾರ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಸಾಮಾಜಿಕ ಹೋರಾಟಗಾರರಾದ ಮಂಜುನಾಥ್ ಗೋಪಾಲಪುರ, ರಾಯನಹಳ್ಳಿ ಪ್ರಭು, ಈರಯ್ಯ, ದಸಂಸ ಚಾಮರಾಜನಗರ ಸಂಚಾಲಕ ಬೆಳ್ಳಿಯಪ್ಪ, ಆರುಂಧತಿ ಸಹಕಾರ ಸಂಘದ ಅಧ್ಯಕ್ಷ ಕೆಂಚಯ್ಯ ಇದ್ದರು.