ಜಿಲ್ಲೆ

ಬಿಜೆಪಿಯಿಂದ ಬಂಡಾಯ ಅಭ್ಯರ್ಥಿ ಇಲ್ಲ

Chitradurga

ಹೊಳಲ್ಕೆರೆ: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಪಕ್ಷದಿಂದ ಯಾವುದೇ ಬಂಡಾಯ ಅಭ್ಯರ್ಥಿ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಸಂಘಟನಾ ಸಭೆಯಲ್ಲಿ ಮಾತನಾಡಿದರು. ಟಿಕೆಟ್ ಆಕಾಂಕ್ಷಿ ಚಿದಾನಂದ ಎಂ.ಗೌಡ, ಪಪಂ ಸದಸ್ಯ ಕೆ.ಸಿ.ರಮೇಶ್, ವಕೀಲರ ಸಂಘದ ಅಧ್ಯಕ್ಷ ಜಿ.ಈ.ರಂಗಸ್ವಾಮಿ, ಕಾರ್ಯದರ್ಶಿ ರೂಪಾ ಸುರೇಶ್, ವಕೀಲರಾದ ಜಿ.ಎಚ್.ಶಿವಕುಮಾರ್, ಬಸವರಾಜ್, ಒ.ಪರಮೇಶ್ವರ್ ಇತರರಿದ್ದರು.