ಜಿಲ್ಲೆ

ಜಯಂತ್ಯುತ್ಸವ ಆಚರಣೆಗೆ ಸಿದ್ಧತೆ

Chitradurga

ಹೊಳಲ್ಕೆರೆ: ವಿವಿಧ ಕ್ಷೇತ್ರದ ಸಾಧಕರ ಜಯಂತಿ ಸಾಂಕೇತಿಕ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಕೆ.ನಾಗರಾಜ್ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜ.21ರಂದು ಅಂಬಿಗರ ಚೌಡಯ್ಯ, 14ರಂದು ಸಿದ್ಧರಾಮೇಶ್ವರ, ಜ.19ರಂದು ವೇಮನ ಜಯಂತಿಯನ್ನು ಮಿನಿವಿಧಾನ ಸೌಧ ಸಭಾಂಗಣದಲ್ಲಿ ಆಚರಿಸಲಾಗುವುದು ಎಂದರು.

ಆಯಾ ಸಮಾಜಗಳಿಂದ ಕಾರ್ಯಕ್ರಮ ಆಯೋಜಿಸಿರುವುದರಿಂದ ಸರ್ಕಾರದ ವತಿಯಿಂದ ಸರಳವಾಗಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ವಿವಿಧ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.