ಜಿಲ್ಲೆ

ಪಪಂನಿಂದ 25 ಹಂದಿಗಳ ಸೆರೆ

Chitradurga

ಹೊಳಲ್ಕೆರೆ: ಸಾರ್ವಜನಿಕರ ದೂರಿನ ಮೇರೆಗೆ ಭಾನುವಾರ ಕಾರ್ಯಾಚರಣೆಗಿಳಿದ ಪಪಂ ಸಿಬ್ಬಂದಿ 25ಕ್ಕೂ ಅಧಿಕ ಹಂದಿಗಳನ್ನು ಸೆರೆ ಹಿಡಿದಿದೆ.

ಹಲವು ವರ್ಷಗಳಿಂದ ಕೆರೆ ಅಂಗಳದಲ್ಲಿ ವಾಸಿಸುತ್ತಿದ್ದ ಹಂದಿಗಳು, ಇತ್ತೀಚೆಗೆ ಜನವಸತಿ ಪ್ರದೇಶಗಳಿಗೆ ಬಂದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವು. ಇವುಗಳ ಕಾಟ ತಾಳದ ಜನರು ಹಂದಿಗಳನ್ನು ಸೆರೆಹಿಡಿಯುವಂತೆ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದರು.

ಕಾರ್ಯಾಚರಣೆ ವೇಳೆ ಪಪಂ ಮುಖ್ಯಾಧಿಕಾರಿ ವಾಸಿಂ, ಕಾರ್ಯದರ್ಶಿ ಕುಮಾರ್, ಆರೋಗ್ಯಾಧಿಕಾರಿ ಪರಮೇಶ್ವರಪ್ಪ ಇತರರಿದ್ದರು.