ಜಿಲ್ಲೆ

ಹೊಳಲ್ಕೆರೆ ತಾಲೂಕಿನ 83 ಕೆರೆಗಳಿಗೆ ನೀರು

Chitradurga

ಹೊಳಲ್ಕೆರೆ: ಹೊಳಲ್ಕೆರೆ ಕ್ಷೇತ್ರದಲ್ಲಿ ವಿವಿಧ ನೀರಾವರಿ ಯೋಜನೆಗಳಡಿ ಪ್ರಸಕ್ತ ವರ್ಷ 83 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ತಾಲೂಕಿನ ಮುತ್ತುಗದೂರಿನ ಕೆರೆ ಅಭಿವೃದ್ಧಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿ, ಅಪ್ಪರ್ ಭದ್ರಾ ಯೋಜನೆಯಡಿ 31ಕೆರೆಗಳಿಗೆ ನೀರು ಹರಿಸಲು ಪೈಪ್‌ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ ಎಂದರು.

ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ತಾಲೂಕಿನ 9 ಕೆರೆೆಗಳು ಹಾಗೂ ಭರಮಸಾಗರ ಭಾಗದ 40 ಕೆರೆಗಳು ಈ ವರ್ಷ ಭರ್ತಿಯಾಗಲಿವೆ ಎಂದು ತಿಳಿಸಿದರು.

ಕೆರೆಗಳಿಗೆ ನೀರು ಹರಿಯುವುದು ಖಚಿತವಾದ್ದರಿಂದ ಅವುಗಳ ಹೂಳೆತ್ತಿಸ ಲಾಗುತ್ತಿದೆ. ಇದಕ್ಕಾಗಿ ಸರ್ಕಾರ ನೂರು ಕೋಟಿ ರೂ. ಅನುದಾನ ನೀಡಿದೆ. ಈ ಮೊತ್ತದಲ್ಲಿ ಕೆರೆ ಏರಿ, ಹೂಳು ಹಾಗೂ ಜಾಲಿ ತೆರವು ಇತರ ಕಾರ್ಯ ಕೈಗೊಳ್ಳಲಾಗುವುದು ಎಂದರು.

ಲಾಕ್‌ಡೌನ್ ಕಾರಣ ಅಪ್ಪರ್ ಭದ್ರಾ ಯೋಜನೆಯಡಿ ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ವಿಳಂಬವಾಗಿದೆ. ಶೀಘ್ರವೇ ಮರು ಚಾಲನೆ ದೊರೆತು ಕೆಲಸ ಪೂರ್ಣಗೊಳ್ಳಲಿದೆ ಎಂದರು.

ಬಿಜೆಪಿ ಅಧ್ಯಕ್ಷ ಕಾಶಿ ಸಿದ್ದೇಶ್, ಜಿಪಂ ಸದಸ್ಯ ಎಂ.ಬಿ. ತಿಪ್ಪೇಸ್ವಾಮಿ ಮತ್ತಿತರರಿದ್ದರು.