ಜಿಲ್ಲೆ

ಕಾರ್ಮಿಕರು, ನಿರಾಶ್ರಿತರಿಗೆ ಆಹಾರದ ಕಿಟ್ ವಿತರಣೆ

Chitradurga

ಹೊಳಲ್ಕೆರೆ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಕೂಲಿ ಕಾರ್ಮಿಕರು, ನಿರಾಶ್ರಿತರು, ಅಲೆಮಾರಿಗಳು, ಸುಡುಗಾಡು ಸಿದ್ಧರು, ಆರ್ಥಿಕ ದುರ್ಬಲ ಕುಟುಂಬಗಳಿಗೆ 15 ಲಕ್ಷ ರೂ. ಮೌಲ್ಯದ ಆಹಾರ ಧಾನ್ಯಗಳ ಕಿಟ್ ನೀಡಲಾಗಿದೆ ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.

ತಾಲೂಕಿನ ಗುಂಜಿಗನೂರಿನಲ್ಲಿ ಮಂಗಳವಾರ ಕಾರ್ಮಿಕ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದರು.

ಬಿಪಿಎಲ್ ಕುಟುಂಬಗಳಿಗೆ ಈಗಾಗಲೇ 3 ತಿಂಗಳ ಪಡಿತರ ನೀಡಿದೆ. ಇಷ್ಟಾದರೂ ಕೂಲಿ ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಇಂತವರನ್ನು ಗುರುತಿಸಿ ಅವರಿಗೆ ಆಹಾರ ಧಾನ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.

ಆಹಾರ ಧಾನ್ಯಗಳ ದಾನಿ ದಾವಣಗೆರೆ ವೆಂಕಟೇಶ್ವರ ಗ್ರಾನೈಟ್ ಉದ್ಯಮಿ ಗೌಡರ ಇಂದ್ರಪ್ಪ ಮಾತನಾಡಿ, ಹಳ್ಳಿಗರು ಸಂಕಷ್ಟದಲ್ಲಿದ್ದಾರೆ. ಇವರಿಗೆ ಉಳ್ಳವರು ನೆರವಿನ ಹಸ್ತ ಚಾಚಬೇಕು ಎಂದರು.

ಜಿಪಂ ಸದಸ್ಯ ಸುಮಾ ಲಿಂಗರಾಜ್, ಗ್ರಾಪಂ ಅಧ್ಯಕ್ಷ ಡಿ.ಸಿ. ಮೋಹನ್, ಪಪಂ ಸದಸ್ಯ ಮುರುಗೇಶ್ ಮತ್ತಿತರರಿದ್ದರು.