ಜಿಲ್ಲೆ

ಅಂಬ್ಯುಲೆನ್ಸ್‌ನಲ್ಲಿ ಅಕ್ರಮ ಮದ್ಯ ಸಾಗಣೆ

Chitradurga

ಹೊಳಲ್ಕೆರೆ: ಸರ್ಕಾರಿ ಅಂಬುಲೆನ್ಸ್ ಹಾಗೂ ಒಂದು ಓಮಿನಿ ವಾಹನದಲ್ಲಿದ್ದ 60614 ರೂ. ಮೌಲ್ಯದ 14 ಬಾಕ್ಸ್ ಅಕ್ರಮ ಮದ್ಯವನ್ನು ಶಿವಗಂಗಾ ಗ್ರಾಮದಲ್ಲಿ ಮಂಗಳವಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕರಾದ ಗಿರೀಶ, ಜೀವನ್, ಎಚ್.ಡಿ.ಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಬುಲೆನ್ಸ್ ಚಾಲಕ ಸುಬಾನ್, ಲ್ಯಾಬ್‌ಟೆಕ್ನಿಷಿಯನ್ ಸಂತೋಷನನ್ನು ಬಂಧಿಸಲಾಗಿದೆ.

ಅಂಬುಲೆನ್ಸ್‌ನಲ್ಲಿದ್ದ ಮದ್ಯವನ್ನು ಓಮಿನಿಗೆ ಸ್ಥಳಾಂತರಿಸುತ್ತಿದ್ದಾಗ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದಿದ್ದಾರೆ. ಪಿಎಸ್‌ಐ ಮಂಜುನಾಥ್ ಕುರಿ ಮತ್ತವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಚಿತ್ರಹಳ್ಳಿಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.