ಜಿಲ್ಲೆ

ಕುಕ್ಕಾಡೇಶ್ವರಿ ಜಾತ್ರೆಗೆ ಚಾಲನೆ

Chitradurga

ಹೊಳಲ್ಕೆರೆ: ನಗರ ದೇವತೆ ಶ್ರೀ ಕುಕ್ಕಾಡೇಶ್ವರಿ ದೇವಿ ಜಾತ್ರಾ ಮಹೋತ್ಸವವು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ.

ಜ.6ರಂದು ಜನಪದ ಕಲಾತಂಡಗಳೊಂದಿಗೆ ಶ್ರೀ ಬೀರಲಿಂಗೇಶ್ವರ ಸ್ವಾಮಿ ಮತ್ತು ಕುಕ್ಕಾಡೇಶ್ವರಿ ಅಮ್ಮನವರ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ.

7ರ ಬೆಳಗ್ಗೆ 9ಕ್ಕೆ ಬೀರಲಿಂಗೇಶ್ವರ ಸ್ವಾಮಿ ಹಾಗೂ ಕುಕ್ಕಾಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಬಳಿಕ ಉಭಯ ದೇವರುಗಳನ್ನು ಉತ್ಸವದ ಮೂಲಕ ಮೂಲ ಸನ್ನಿಧಾನಕ್ಕೆ ಕರೆದೊಯ್ಯಲಾಗುವುದು.

ರಾತ್ರಿ 8ಕ್ಕೆ ಕುಕ್ಕಾಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ನಂತರ ಅನ್ನ ಸಂತರ್ಪಣೆ ಕಾರ್ಯ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿ ಕೃಪೆಗೆ ಪಾತ್ರಾರಾಗಬೇಕೆಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಎಸ್.ರುದ್ರಪ್ಪ ತಿಳಿಸಿದ್ದಾರೆ.