ಹೊಳಲ್ಕೆರೆ: ದೇಶದ ಸಂವಿಧಾನ ಎಲ್ಲ ಕಾನೂನುಗಳ ತಾಯಿಯಾಗಿದ್ದು, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಅದರ ಪ್ರಮುಖ ಆಶಯಗಳಾಗಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರೇಮಾ ವಸಂತರಾವ್ ಪವಾರ್ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆಯಿಂದ ಪಟ್ಟಣ ಸಮೀಪದ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಬುಧವಾರ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ನಮಗೆ ಮೂಲ ಹಕ್ಕುಗಳನ್ನು ನೀಡಿದೆ. ಅವುಗಳ ಸೌಲಭ್ಯ ಹೇಗೆ ಪಡೆಯಬೇಕು ಎನ್ನುವುದು ಇಂತಹ ಕಾರ್ಯಕ್ರಮದ ಮೂಲಕ ತಿಳಿಸಿವುದು ಮುಖ್ಯ ಉದ್ದೇಶ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ವಿ.ರವಿಕುಮಾರ್ ಮಾತನಾಡಿ, ಎ.ಪಿ.ಜೆ.ಅಬ್ದುಲ್ ಕಲಾಂ ಹೇಳಿದ ಹಾಗೆ ಯಶಸ್ಸನ್ನು ಕಾಣಬೇಕಾದರೆ ಕನಸ್ಸನ್ನು ನೋಡಬೇಕು. ಮುಂದೆ ಗುರಿ ತಲುಪುವ ಕನಸು ಕಾಣಬೇಕು ಎಂದು ತಿಳಿಸಿದರು.
ಪ್ರಾಂಶುಪಾಲ ಎನ್.ಶಿವಮೂರ್ತಿ, ಉಪತಹಸೀಲ್ದಾರ್ ವನಜಾಕ್ಷಮ್ಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಆರ್.ಅವಿನ್, ವಕೀಲರ ಸಂಘದ ಉಪಾಧ್ಯಕ್ಷ ಜಗದೀಶ್, ಬಿಇಒ ಜಗದೀಶ್ವರ್, ಟಿ.ಎಚ್.ಒ.ಜಯಸಿಂಹ, ಪಪಂ ಮುಖ್ಯಾಧಿಕಾರಿ ವಾಸೀಂ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.