ಬಂಟ್ವಾಳ: ಹೊಕ್ಕಾಡಿಗೋಳಿ ಶಾಲಾ ವಾರ್ಷಿಕೋತ್ಸವಕ್ಕೆ ಶ್ರೀ ಕ್ಷೇತ್ರ ಪೂಂಜದ ಆಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಹುಲಿಮೇರು ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನೆರವೇರಿತು. ನಿವೃತ್ತ ಮುಖ್ಯಶಿಕ್ಷಕ ಕೃಷ್ಣಪ್ಪ ಮಾಸ್ಟರ್, ರಾಜು ಪೂಜಾರಿ, ರುಕ್ಮಯ್ಯ ಪೂಜಾರಿ ಹಾಗೂ ರಾಜೇಶ್ ನೆಲ್ಯಾಡಿ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಾ.ಸ್ಮತಿ, ರೋಟರಿ ವಲಯ ಲೆಫ್ಟಿನೆಂಟ್ ಗಣೇಶ್ ಶೆಟ್ಟಿ, ಸಿಎ ಬ್ಯಾಂಕ್ ಮಾಜಿ ನಿರ್ದೇಶಕ ರಮೇಶ್ ಮಂಜಿಲಾ, ಉದ್ಯಮಿಗಳಾದ ಮನೋಜ್ ಕುಮಾರ್, ಕಿರಣ್ ಮಂಜಿಲಾ, ಶಿಕ್ಷಣ ಸಂಯೋಜಕ ಸಿದ್ದಲಿಂಗ ಸ್ವಾಮಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಸುಮಿತ್ರಾ ಎಸ್.ಸ್ವಾಗತಿಸಿ, ಸುತಿಕ್ಷಾ ವಂದಿಸಿದರು. ಸಿಲ್ವಿಯ ಮಿರಾಂದ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಶುಭ ಹಾರೈಸಿದರು.
ಮಧ್ಯಾಹ್ನ ಸಭಾ ಕಾರ್ಯಕ್ರಮ ಆರಂಬೋಡಿ ಗ್ರಾಪಂ ಅಧ್ಯಕ್ಷ ಪ್ರವೀಣ ಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ನೆರವೇರಿತು. ಸಿದ್ದಕಟ್ಟೆ ಕಂಬಳ ಸಮಿತಿ ಸಂದೀಪ್ ಶೆಟ್ಟಿ ಪೊಡುಂಬ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಉಪಾಧ್ಯಕ್ಷೆ ತೇಜಸ್ವಿನಿ, ಸದಸ್ಯರಾದ ಪ್ರಭಾಕರ್ ಎಚ್., ಸುರೇಂದ್ರ, ಜಗದೀಶ್ ಎಚ್., ರಕ್ಷಣ್ ಮೇಲಂಟ, ರೋಟರಿ ಕ್ಲಬ್ ಲೊರಟ್ಟೋ ಹಿಲ್ಸ್ ಅಧ್ಯಕ್ಷ ಸುರೇಶ್ ಶೆಟ್ಟಿ, ಶಿವಯ್ಯ ಎಸ್.ಎಲ್., ರಶ್ಮಿತ್ ಶೆಟ್ಟಿ, ಪ್ರಭಾಕರ ಪ್ರಭು ಶ್ರೀನಿಶಿತ್ ಡಿ.ಹಿಂಗಾಣಿ ಉಪಸ್ಥಿತರಿದ್ದರು.
ಕಟ್ಟಡ ನಿರ್ಮಾಣ ಸಮಿತಿ ಸದಸ್ಯ ಹರೀಶ್ ಹಿಂಗಾಣಿ, ಆನಂದ ಬೃಂದಾವನ, ರಮೇಶ್, ಲಕ್ಷ್ಮಿ ಕಾಂತರಬೆಟ್ಟು, ಶ್ವೇತಾ ಮನೋಜ್ ಪೂಜಾರಿ, ಎಸ್.ಮಹಮ್ಮದ್, ರಾಜೀವಿ, ನಾಗೇಶ್, ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ರಾಘವೇಂದ್ರ ಭಟ್ ಅವರನ್ನು ಅಭಿನಂದಿಸಲಾಯಿತು.
ಮುಖ್ಯಶಿಕ್ಷಕಿ ಸುಮಿತ್ರಾ ಎಸ್.ವರದಿ ಮಂಡಿಸಿದರು. ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್ ಸ್ವಾಗತಿಸಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಶುಭವತಿ ವಂದಿಸಿದರು. ಶಿಕ್ಷಕಿಯರಾದ ಸುಚಿತ್ರಾ, ಮೆಟಿಲ್ದಾ ಡಿಸೋಜಾ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.