ಜಿಲ್ಲೆ

ಉಳವಿಯಲ್ಲಿ ಷಟ್​ಸ್ಥಲ ಧ್ವಜಾರೋಹಣ

ಬಸವರಾಜ ವೀರಪ್ಪ ಗರಗ

ಜೊಯಿಡಾ: ಉಳವಿ ಜಾತ್ರಾ ಮಹೋತ್ಸವ ನಿಮಿತ್ತ ಶ್ರೀ ಚನ್ನ ಬಸವೇಶ್ವರ ಗದ್ದುಗೆಗೆ ಶುಕ್ರವಾರ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ ಮಹಾದ್ವಾರದ ಮೇಲೆ ಷಟ್​ಸ್ಥಲ ಧ್ವಜಾರೋಹಣ ನೆರವೇರಿ ಸಲಾಯಿತು. ಪ್ರಧಾನ ಅರ್ಚಕ ಶಂಕ್ರಯ್ಯ ಕಲ್ಮಠ, ವಿನಯ ಹೊಸಮಠ, ಶಾಂತವೀರೇಶ ಕಲ್ಮಠ, ಸಂತೋಷ ಹೊಸಮಠ ಅವರು ಶ್ರೀ ಚನ್ನ ಬಸವೇಶ್ವರ ದೇವರ ಭಾವಚಿತ್ರಕ್ಕೆ ಪೂಜಾ ಸಂಕಲ್ಪ ಮಾಡಿದರು. ಉಳವಿ ಟ್ರಸ್ಟ್್ಟ ಕಮಿಟಿ ಅಧ್ಯಕ್ಷ ಗಂಗಾಧರ, ಟ್ರಸ್ಟ್ ಕಮಿಟಿ ಮಲ್ಲಿಕಾರ್ಜುನ ಉಪ್ಪಿನಮಠ, ಉಳವಿ ಗ್ರಾಪಂ ಅಧ್ಯಕ್ಷ ಮಂಜುನಾಥ ಮುಖಾಶಿ, ಇತರರಿದ್ದರು.