ಜಿಲ್ಲೆ

ನೋಡುಗರ ಗಮನ ಸೆಳೆದ ಹಾಕಿ

ಗೋಣಿಕೊಪ್ಪ: ಇಲ್ಲಿನ ಕೆ.ಬಿ ಪ್ರೌಢಶಾಲೆಯ ವಜ್ರಮೋಹತ್ಸವ ಪ್ರಯುಕ್ತ ನಡೆಯುತ್ತಿರುವ ಹಾಕಿ ಕೂರ್ಗ್‌ನ ನೋಂದಾಯಿತ ತಂಡಗಳ ಪಂದ್ಯದಲ್ಲಿ ಎಎಸ್‌ಸಿ ಅಮ್ಮತಿ ತಂಡವು ಬಿಬಿಸಿ ಗೋಣಿಕೊಪ್ಪ ತಂಡವನ್ನು 3-2 ಗೋಲುಗಳ ಅಂತರದಿಂದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

ದ್ವಿತಿಯ ಪಂದ್ಯದಲ್ಲಿ ಬೋಳಿಯೂರು ತಂಡವು, ಅಂಜಿಕೇರಿ ನಾಡು ವಿರುದ್ಧ 1-0 ಗೋಲುಗಳ ಅಂತರದಿಂದ ಜಯಗಳಿಸಿತು.

ಮೂರನೇ ಪಂದ್ಯದಲ್ಲಿ ಡ್ರಿಬ್ಲರ್ಸ್ ಹಂಪ್ ಕುತ್ತ್ ನಾಡು ತಂಡವು, ಕಿಗ್ಗಟ್ ನಾಡು ಪ್ಲಯಿಂಗ್‌ಏಲ್ಬೊ ತಂಡದ ವಿರುದ್ಧ 3-0 ಗೋಲುಗಳ ಅಂತರದಿಂದ ಜಯಗಳಿಸಿತು.

ಕೊನೆಯ ಪಂದ್ಯದಲ್ಲಿ ಸ್‌ಆರ್‌ಸಿ ಕಾಕೊಟುಪರಂಬು ಮತ್ತು ಶಿವಾಜಿ ನಾಪೋಕ್ಲು ನಡುವಿನ ಸೆಣಸಾಟದಲ್ಲಿ ಶಿವಾಜಿ ತಂಡವು 4-2ಗೋಲುಗಳ ಅಂತರದಿಂದ ಜಯಗಳಿಸಿತು.

ಪಂದ್ಯದ ನಿರ್ದೇಶಕರಾಗಿ ಸಣ್ಣುವಂಡ ಲೋಕೇಶ್ ನಂಜಪ್ಪ, ತೀರ್ಪುಗಾರರಾಗಿ ಚೈಯಂಡ ಅಪ್ಪಚ್ಚು, ಕರವಂಡ ಅಪ್ಪಣ, ಕುಪ್ಪಂಡ ದಿಲನ್, ರಾಯಲ್ ಐಯ್ಯಣ್ಣ, ಸಚಿನ್ ಮಂದಣ್ಣ, ವಿನೋದ್ ಕುಮಾರ್, ಅಪ್ಪಚೆಟೋಳಂಡ ಅಯ್ಯಪ್ಪ, ಕಲ್ಮಾಡಂಡ ಸೋಮಣ್ಣ, ಕಾರ್ಯ ನಿರ್ವಹಿಸಿದರು. ವೀಕ್ಷಕ ವಿವರಣೆಯನ್ನು ಮಾಲೆಟಿರ ಶ್ರೀನಿವಾಸ್ ನೀಡಿದರು.