ಮಡಿಕೇರಿ:
ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮತ್ತು ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಮುದ್ದಂಡ ಹಾಕಿ ನಮ್ಮೆಯಲ್ಲಿ ಮಂಗಳವಾರ 17 ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆದಿವೆ. ಪಟ್ಟಡ ಮತ್ತು ಬಿದ್ದಂಡ ತಂಡಗಳ ನಡುವೆ ಮೈದಾನ 2ರಲ್ಲಿ ನಡೆದ ಪಂದ್ಯ ಸಮಬಲದ ಕಾದಾಟಕ್ಕೆ ಸಾಕ್ಷಿ ಆಯಿತು. ಈ ಪಂದ್ಯದಲ್ಲಿ ತಲಾ 1 ಗೋಲುಗಳ ಸಮಬಲದಿಂದಾಗಿ ನಡೆದ ಟೈ ಬ್ರೇಕರ್‌ನಲ್ಲಿ ಕೂಡ 3-3 ಸಮಬಲ ಎದುರಾಯಿತು. ನಂತರ ನಡೆದ ಸಡನ್ ಡೆತ್‌ನಲ್ಲಿ 2-1 ಗೋಲುಗಳ ಅಂತರದಲ್ಲಿ ಪಟ್ಟಡ ತಂಡ ಜಯ ಸಾಧಿಸಿತು.
ಮೈದಾನ 1ರಲ್ಲಿ ತೆಕ್ಕಡ ಮತ್ತು ಮಾಳೇಟಿರ (ಕುಕ್ಲೂರು) ನಡುವಿನ ಪಂದ್ಯದಲ್ಲಿ ತಲಾ 1 ಗೋಲು ಸಮಬಲವಾದ ಕಾರಣ ಟೈ ಬ್ರೇಕರ್‌ನಲ್ಲಿ 4-2 ಗೋಲುಗಳ ಅಂತರದಲ್ಲಿ ಮಾಳೇಟಿರ ತಂಡ ಜಯ ದಾಖಲಿಸಿತು. ಬಲ್ಲಚಂಡ ಮತ್ತು ಕಾವಾಡಿಚಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಬಲ್ಲಚಂಡ ತಂಡ ಗೆಲುವು ಸಾಧಿಸಿದರೆ ಮೇಕೇರಿರ ಮತ್ತು ಕಡೇಮಾಡ ನಡುವಿನ ಪಂದ್ಯದಲ್ಲಿ 5-2 ಗೋಲುಗಳ ಅಂತರದಲ್ಲಿ ಮೇಕೇರಿರ ತಂಡ ಗೆಲುವು ದಾಖಲಿಸಿತು. ನಂಬುಡಮಾಡ ಮತ್ತು ಉಳ್ಳಿಯಡ ನಡುವಿನ ಪಂದ್ಯದಲ್ಲಿ ವಾಕ್ ಓವರ್ ನಲ್ಲಿ ನಂಬುಡಮಾಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಬಲ್ಲಡಿಚಂಡ ಮತ್ತು ಚೊಟ್ಟೆಯಂಡಮಾಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಚೊಟ್ಟೆಯಂಡಮಾಡ ತಂಡ ಗೆಲುವು ಸಾಧಿಸಿದರೆ, ಅಯ್ಯನೆರವಂಡ ಮತ್ತು ತೀತರಮಾಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 1 ಗೋಲುಗಳ ಮೂಲಕ ಸಮಬಲ ತೋರಿದ ಕಾರಣ ನಂತರ ನಡೆದ ಟೈಬ್ರೇಕರ್ ನಲ್ಲಿ 4-3 ಗೋಲುಗಳ ಅಂತರದಲ್ಲಿ ಅಯ್ಯನೆರವಂಡ ಜಯ ಸಾಧಿಸಿತು.
ಮೈದಾನ 2ರಲ್ಲಿ ಅಲ್ಲಪಂಡ ಮತ್ತು ಪಟ್ಟಚೆರುವಂಡ ನಡುವಿನ ಪಂದ್ಯದಲ್ಲಿ 2-2 ಗೋಲುಗಳಿಂದ ಸಮಬಲವಾದ ಕಾರಣ ಟೈ ಬ್ರೇಕರ್‌ನಲ್ಲಿ ಅಲ್ಲಪಂಡ 4-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಪಟ್ಟಡ ಮತ್ತು ಬಿದ್ದಂಡ ತಂಡಗಳ ನಡುವಿನ ಪಂದ್ಯದಲ್ಲಿ ತಲಾ 1 ಗೋಲುಗಳ ಸಮಬಲದಿಂದಾಗಿ ನಡೆದ ಟೈ ಬ್ರೇಕರ್‌ನಲ್ಲಿ ಕೂಡ 3-3 ಸಮಬಲ ಎದುರಾಯಿತು. ನಂತರ ನಡೆದ ಸಡನ್ ಡೆತ್‌ನಲ್ಲಿ 2-1 ಗೋಲುಗಳ ಅಂತರದಲ್ಲಿ ಪಟ್ಟಡ ತಂಡ ಜಯ ಸಾಧಿಸಿತು. ಪಟ್ಟಮಾಡ ಮತ್ತು ಕುಲ್ಲಚಂಡ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಕುಲ್ಲಚಂಡ ತಂಡ ಜಯ ಸಾಧಿಸಿದರೆ ಅಜ್ಜಿನಿಕಂಡ ಮತ್ತು ಬೊಳಿಯಾಂಡಿರ ತಂಡಗಳ ನಡುವಿನ ಪಂದ್ಯದಲ್ಲಿ ತಲಾ 1 ಗೋಲುಗಳ ಮೂಲಕ ಎರಡು ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ನಂತರ ನಡೆದ ಟೈ ಬ್ರೇಕರ್‌ನಲ್ಲಿ 4-2 ಗೋಲುಗಳ ಅಂತರದಲ್ಲಿ ಬೊಳಿಯಾಂಡಿರ ತಂಡ ವಿಜಯ ಸಾಧಿಸಿತು. ಕೊಂಡಿರ ಮತ್ತು ಪೆಮ್ಮಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಪೆಮ್ಮಂಡ ಜಯ ಸಾಧಿಸಿತು.
ಮೈದಾನ 3ರಲ್ಲಿ ಕಂಬೆಯAಡ ಮತ್ತು ಮಾಚಿಮಂಡ ನುಡವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕಂಬೆಯAಡ ತಂಡ ಗೆಲುವು ದಾಖಲಿಸಿತು. ಚೀಯಕಪೂವಂಡ ಮತ್ತು ಕಾಂಡAಡ ನಡುವಿನ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಕಾಂಡAಡ ಜಯ ಸಾಧಿಸಿದರೆ, ಚೀರಿಯಂಡ ಮತ್ತು ನುಚ್ಚಿಮಣಿಯಂಡ ನಡುವಿನ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ನುಚ್ಚಿಮಣಿಯಂಡ ಗೆಲುವು ಸಾಧಿಸಿತು. ಮಲ್ಲಂಡ ಮತ್ತು ಪಾಂಡಿರ (ಗಾಳಿಬೀಡು) ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಮಲ್ಲಂಡ ತಂಡ ಜಯ ಸಾಧಿಸಿತು. ನಾಪನೆರವಂಡ ಮತ್ತು ಮಾಳೆಯಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಮಾಳೆಯಂಡ ತಂಡ ಜಯ ಸಾಧಿಸಿದರೆ ಚೆಂಬAಡ ಮತ್ತು ಮುಂಡಚಾಡಿರ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಎರಡು ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 6-5 ಗೋಲುಗಳ ಅಂತರದಲ್ಲಿ ಚೆಂಬAಡ ತಂಡ ಜಯ ಸಾಧಿಸಿತು.