ಜಿಲ್ಲೆ

ಹಾಕಿ ಪಂದ್ಯಾವಳಿಯಲ್ಲಿ ಸಮಬಲದ ಹೋರಾಟ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಮುದ್ದಂಡ ಕಪ್ ಹಾಕಿ ನಮ್ಮೆಯ ಸೋಮವಾರದ ಪಂದ್ಯದಲ್ಲಿ 18 ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡವು. ಬಹುತೇಕ ಪಂದ್ಯಗಳಲ್ಲಿ ಸಮಬಲದ ಹೋರಾಟ ಕಂಡು ಬಂದ ಹಿನ್ನೆಲೆಯಲ್ಲಿ ಟೈಬ್ರೇಕರ್ ಅವಕಾಶ ಮಾಡಿಕೊಡಲಾಯಿತು. ಕರ್ತಮಾಡ, ಕೋಳೇರ, ಮಚ್ಚಮಾಡ ತಂಡಗಳು ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷಕೆ ಮನ ಗೆದ್ದವು.

ಮೈದಾನ 1ರಲ್ಲಿ ಬೊಟ್ಟಂಗಡ ಮತ್ತು ಕರ್ತಮಾಡ ತಂಡಗಳ ನಡುವಿನ ಪಂದ್ಯದಲ್ಲಿ ತಲಾ 1 ಗೋಲುಗಳ ಮೂಲಕ ಪಂದ್ಯ ಡ್ರಾ ಆದ ಕಾರಣ ಟೈ ಬ್ರೇಕರ್‌ನಲ್ಲಿ 5-3 ಗೋಲುಗಳ ಅಂತರದಲ್ಲಿ ಕರ್ತಮಾಡ ತಂಡ ಜಯ ಸಾಧಿಸಿತು. ಚಿಂಡಮಾಡ ಮತ್ತು ತೇಲಪಂಡ ನಡುವಿನ ಪಂದ್ಯದಲ್ಲಿ ತಲಾ 1 ಗೋಲು ದಾಖಲಿಸುವ ಮೂಲಕ ಪಂದ್ಯ ಡ್ರಾ ಆದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ಚಿಂಡಮಾಡ ತಂಡ 3-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದರೆ, ಕುಂಡ್ರAಡ ಮತ್ತು ಆಟ್ರಂಗಡ ನಡುವಿನ ಪಂದ್ಯದಲ್ಲಿ ಆಟ್ರಂಗಡ ತಂಡ 1-0 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು. ಕಾಡ್ಯಮಾಡ ಮತ್ತು ಮಳವಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಳವಂಡ ತಂಡ 2-0 ಗೋಲು ಅಂತರದಲ್ಲಿ ಗೆಲುವಿನ ನಗು ಬೀರಿತು. ಅರೆಯಡ ಮತ್ತು ಚೋಕಿರ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 3-2 ಗೋಲುಗಳ ಅಂತರದಲ್ಲಿ ಅರೆಯಡ ತಂಡ ಗೆಲುವು ದಾಖಲಿಸಿತು. ಚೇಂದಿರ ಮತ್ತು ಕಾಯಪಂಡ ನಡುವಿನ ಪಂದ್ಯದಲ್ಲಿ ತಲಾ 1 ಗೋಲುಗಳ ಮೂಲಕ ಸಮಬಲವಾದ ಕಾರಣ ನಂತರ ನಡೆದ ಟೈ ಬ್ರೇಕರ್‌ನಲ್ಲಿ 7-6 ಗೋಲುಗಳ ಅಂತರದಲ್ಲಿ ಕಾಯಪಂಡ ತಂಡ ಗೆಲುವು ದಾಖಲಿಸಿತು.

ಮೈದಾನ 2ರಲ್ಲಿ ಕೋಳೇರ ಮತ್ತು ಕರವಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕೋಳೇರ ತಂಡ ಗೆಲುವು ದಾಖಲಿಸಿದರೆ, ಅಪ್ಪಚೆಟ್ಟೋಳಂಡ ಮತ್ತು ಪಳೆಯಂಡ(ನಾಲ್ಕೇರಿ) ತಂಡಗಳ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಅಪ್ಪಚೆಟ್ಟೋಳಂಡ ತಂಡ ಗೆದ್ದಿತು. ಮನೆಯಪಂಡ ಮತ್ತು ಅಕ್ಕಪಂಡ ನಡುವಿನ ಪಂದ್ಯದಲ್ಲಿ ಮನೆಯಪಂಡ ತಂಡ 4-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಮುದ್ದಿಯಡ ಮತ್ತು ಆಲೆಮಾಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ನಿಗದಿತ ಅವಧಿಯಲ್ಲಿ ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್ ನಲ್ಲಿ 3-1 ಗೋಲುಗಳ ಅಂತರದಲ್ಲಿ ಆಲೆಮಾಡ ತಂಡ ಜಯ ಸಾಧಿಸಿತು. ಮಾನಿಪಂಡ ಮತ್ತು ಚಕ್ಕೇರ ನಡುವಿನ ಪಂದ್ಯದಲ್ಲಿ 2-0 ಗೋಲು ಅಂತರದಲ್ಲಿ ಚೆಕ್ಕೇರ ತಂಡ ಜಯ ಸಾಧಿಸಿದರೆ ಬೊಳ್ತಂಡ ಮತ್ತು ಬೊಜ್ಜಂಗಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಬೊಜ್ಜಂಗಡ ತಂಡ ಜಯದ ನಗು ಚೆಲ್ಲಿತು.

ಮೈದಾನ 3ರಲ್ಲಿ ಮಚ್ಚಮಾಡ ಮತ್ತು ಎಳ್ತಂಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 4-3 ಗೋಲುಗಳ ಅಂತರದಲ್ಲಿ ಮಚ್ಚಮಾಡ ತಂಡ ಗೆಲುವು ಸಾಧಿಸಿತು. ಕೊಂಗAಡ ಮತ್ತು ಕೋದಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಕೊಂಗAಡ ಜಯ ಸಾಧಿಸಿತು. ಕಳ್ಳೇಂಗಡ(ಬೆಳ್ಳೂರು) ಮತ್ತು ಕಂಬೀರAಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಕಂಬೀರAಡ ತಂಡ ಜಯ ಸಾಧಿಸಿದರೆ, ಬಾಳೆಯಡ ಮತ್ತು ಮೂಕಳೇರ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 1 ಗೋಲು ದಾಖಲಿಸಿ ಸಮಬಲ ಪ್ರದರ್ಶನ ಮಾಡಿದ ಕಾರಣ ಟೈ ಬ್ರೇಕರ್‌ನಲ್ಲಿ 4-3 ಗೋಲುಗಳ ಅಂತರದಲ್ಲಿ ಬಾಳೆಯಡ ತಂಡ ಗೆಲುವು ಸಾಧಿಸಿತು. ಪಾಲೆಯಡ ಮತ್ತು ಕೊಣೇರಿರ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕೊಣೇರಿರ ತಂಡ ಗೆಲುವು ಸಾಧಿಸಿತು. ಇಟ್ಟೀರ ಮತ್ತು ಅಲ್ಲಂಡ ನಡುವಿನ ಪಂದ್ಯದಲ್ಲಿ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಇಟ್ಟೀರ ತಂಡ ಜಯ ಸಾಧಿಸಿತು.