ಮಡಿಕೇರಿ:
ಕೊಡವ ಕುಟುಂಬಗಳ ಮಧ್ಯೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಕಪ್ ಹಾಕಿಯ ಶನಿವಾರದ ಪಂದ್ಯದಲ್ಲಿ 15 ತಂಡಗಳು ಮುಂದಿನ ಮುಂದಿನ ಹಂತ ಪ್ರವೇಶಿಸಿವೆ. ಅಪ್ಪಾರಂಡ ಮತ್ತು ಮೂಕಚಂಡ ತಂಡಗಳ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು.
ಮೈದಾನ 1ರಲ್ಲಿ ಅಪ್ಪಂಡೇರAಡ ಮತ್ತು ಕಾಳಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಳಿಮಾಡ ತಂಡ 2-1 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕಾಳಿಮಾಡ ತಂಡದ ಪರ ಶರತ್ ಮುತ್ತಪ್ಪ ಎರಡು ಗೋಲು ದಾಖಲಿಸಿದರು. ಅಪ್ಪಂಡೇರAಡ ಬೋಪಣ್ಣ ಒಂದು ಗೋಲು ಬಾರಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ತಾಪಂಡ ಮತ್ತು ಬಲ್ಲಂಡ ತಂಡಗಳ ನಡುವಿನ ಪಂದ್ಯದಲ್ಲಿ3-0 ಗೋಲುಗಳ ಅಂತರದಲ್ಲಿ ತಾಪಂಡ ಗೆಲುವು ಸಾಧಿಸಿತು. ತಾಪಂಡದ ಪರ ಸೋಮೇಶ್ 2 ಮತ್ತು ವಿಜು 1 ಗೋಲು ಹೊಡೆದರು. ಬಲ್ಲಂಡ ಚೆಂಗಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾದರು.
ಚೇನಂಡ ಮತ್ತು ಚೀಯಂಡಿರ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಚೇನಂಡ ಗೆಲುವು ಸಾಧಿಸಿದ್ದು ವಿಜೇತ ತಂಡದ ಪರ ಪುಟ್ಟ ಉತ್ತಪ್ಪ, ಮೌರ್ಯ ತಿಮ್ಮಯ್ಯ ಹಾಗೂ ಚಮನ್ ಮಂದಣ್ಣ ತಲಾ 1 ಗೋಲು ದಾಖಲಿಸಿದರು. ಕಿಲನ್ ನಾಚಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚೋಯಮಾಡಂಡ ಮತ್ತು ಮೂಡೇರ ತಂಡಗಳ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಚೋಯಮಾಡಂಡ ತಂಡ ಗೆದ್ದಿತು.
ತಂಡದ ಪರ ಮುದ್ದಪ್ಪ 1 ಗೋಲು ಹೊಡೆದರು. ಮೂಡೇರ ಪೊನ್ನಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಅಪ್ಪಾರಂಡ ಮತ್ತು ಮೂಕಚಂಡ ತಂಡಗಳ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾದ ಹಿನ್ನೆಲೆಯಲ್ಲಿ ಪೆನಾಲ್ಟಿ ಸ್ಟೊçÃಕ್ಸ್ನಲ್ಲಿ 5-4 ಗೋಲುಗಳ ಅಂತರದಲ್ಲಿ ಅಪ್ಪಾರಂಡ ತಂಡ ಜಯ ಸಾಧಿಸಿತು. ಮೂಕಚಂಡ ವಿನೀಶ್ ಮುತ್ತಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೈದಾನ 2ರಲ್ಲಿ ನಡೆದ ಪಂದ್ಯದಲ್ಲಿ ಕಂಡ್ರತAಡ ಮತ್ತು ಅಜ್ಜೇಟಿರ ತಂಡಗಳ ಮಧ್ಯೆ ಹಣಾಹಣಿ ನಡೆದು 7-0 ಗೋಲುಗಳ ಅಂತರದಲ್ಲಿ ಅಜ್ಜೇಟಿರ ತಂಡ ಗೆಲುವು ಸಾಧಿಸಿತು. ತಂಡದ ಪರ ಮೋಹನ್ ಸೋಮಯ್ಯ, ಅಚಲ್ ಗಣಪತಿ ಹಾಗೂ ಪೊನ್ನಣ್ಣ ತಲಾ 2, ಶಂಭು ಪಳಂಗಪ್ಪ ಒಂದು ಗೋಲು ಬಾರಿಸಿದರು. ಕಂಡ್ರತAಡ ಇಶಾನ್ ಅಪ್ಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಅಯ್ಯರಣಿಯಂಡ ಮತ್ತು ಕೋಳುಮಾಡಂಡ ನಡುವಿನ ಪಂದ್ಯದಲ್ಲಿ ಕೋಳುಮಾಡಂಡ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕೋಳುಮಾಡಂಡ ಪರ ಚರಣ್ ಚರ್ಮಣ್ಣ 2 ಮತ್ತು ಕಿರಣ್ 1 ಗೋಲು ಹೊಡೆದರು. ಲಿಖಿತ್ ಪೊನ್ನಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪಡೆದರು.
ಮುಕ್ಕಾಟಿರ (ಕಡಗದಾಳ್) ಮತ್ತು ಗಾಂಡAಗಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಮುಕ್ಕಾಟಿರ ತಂಡ ಜಯ ಸಾಧಿಸಿತು. ಮುಕ್ಕಾಟಿರ ಪರ ನಾಣಯ್ಯ 2, ಅಶ್ವಿನ್ ಚರ್ಮಣ್ಣ, ಯಶ್ ಅಪ್ಪಯ್ಯ ಹಾಗೂ ಕಾವ್ಯ ದೇವಯ್ಯ ತಲಾ 1 ಗೋಲು ದಾಖಲಿಸಿದರು. ಬಿನ್ ಬೋಪಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚಂದುರ ಮತ್ತು ಪೊರ್ಕಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಚಂದುರ ಗೆಲುವು ದಾಖಲಿಸಿತು. ಚಂದುರ ಪರ ದೇವಯ್ಯ 1 ಗೋಲು ದಾಖಲಿಸಿದರು. ಲವ ಅಯ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮೂಕಂಡ ಮತ್ತು ಪುಟ್ಟಿಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೂಕಂಡ ತಂಡ 1-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮೂಕಂಡ ಪರ ಮಿತೇಶ್ ಮಾಚಯ್ಯ 1 ಗೋಲು ದಾಖಲಿಸಿದರು. ಪುಟ್ಟಿಚಂಡ ಅರುಣ್ ಪೆಮ್ಮಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪುಲಿಯಂಡ ಮತ್ತು ಕುಂಡ್ಯೋಳAಡ ನಡುವಿನ ಪಂದ್ಯದಲ್ಲಿ ಟೈ ಬ್ರೇಕರ್‌ನಲ್ಲಿ 3-2 ಗೋಲುಗಳ ಅಂತರದಲ್ಲಿ ಕುಡ್ಯೋಳಂಡ ಗೆಲುವು ಸಾಧಿಸಿತು. ಪುಲಿಯಂಡ ದನುಷ್ ಮುದ್ದಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೈದಾನ 3ರಲ್ಲಿ ಚೆಂಗೇಟಿರ ಮತ್ತು ಮುಕ್ಕಾಟಿರ (ದೊಡ್ಡಪುಲಿಕೋಟು) ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡ 4-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮುಕ್ಕಾಟಿರ ಪರ ತರುಣ್ ಮಾಚಯ್ಯ 2, ಹೇಮಂತ್ ಚಂಗಪ್ಪ ಹಾಗೂ ಸುತನ್ ಸುಬ್ಬಯ್ಯ ತಲಾ 1 ಗೋಲು ದಾಖಲಿಸಿದರು. ಚೆಂಗೇಟಿರ ಕರುಂಬಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಅಳಮೇಂಗಡ ಮತ್ತು ಚೆರುವಾಳಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಚೆರುವಾಳಂಡ ಗೆಲುವು ಸಾಧಿಸಿತು. ಚೆರುವಾಳಂಡ ಜೀತ್ ಕಾಳಪ್ಪ 1 ಗೋಲು ದಾಖಲಿಸಿದರು. ಅಳಮೇಂಗಡ ಅಗಸ್ಥö್ಯ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಕಾಂಗೀರ ಮತ್ತು ಸಣ್ಣುವಂಡ ನಡುವಿನ ಪಂದ್ಯದಲ್ಲಿ ಸಣ್ಣುವಂಡ ತಂಡ 4-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಸಣ್ಣುವಂಡ ಕೆ.ಉತ್ತಪ್ಪ 2, ಎಸ್.ಎಂ.ಮಾದಯ್ಯ ಹಾಗೂ ಎಸ್.ಜೆ.ರಿಯಾನ್ ತಲಾ 1 ಗೋಲು ದಾಖಲಿಸಿದರು. ಕಾಂಗೀರ ಆಕಾಶ್ ನಾಚಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕೊಲ್ಲಿರ ಮತ್ತು ಸೋಮೆಯಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಸೋಮೆಯಂಡ ತಂಡ ಜಯ ಸಾಧಿಸಿತು. ಸೋಮೆಯಂಡ ಪರ ಅಪ್ಪಯ್ಯ 2 ಹಾಗೂ ಪುನೀತ್ 1 ಗೋಲು ದಾಖಲಿಸಿದರು. ಕೊಲ್ಲಿರ ಲಶಿತ್ ದೇವಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮಾಚಂಗಡ ಮತ್ತು ಅಲ್ಲಾರಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಅಲ್ಲಾರಂಡ ಜಯ ಸಾಧಿಸಿತು. ಅಲ್ಲಾರಂಡ ಪರ ಗೌತಮ್ ಗಣಪತಿ 1 ಗೋಲು ದಾಖಲಿಸಿದರು. ಮಾಚಂಗಡ ಅಯ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಬಿದ್ದೇರಿಯಂಡ ಮತ್ತು ಓಡಿಯಂಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಓಡಿಯಂಡ ತಂಡ ಗೆಲುವು ದಾಖಲಿಸಿತು. ಓಡಿಯಂಡ ಪರ ಮಾಚಯ್ಯ 2, ವಿನ್ಸಿ ಪೊನ್ನಣ್ಣ ಹಾಗೂ ರವಿ ಕಾವೇರಪ್ಪ ತಲಾ 1 ಗೋಲು ದಾಖಲಿಸಿದರು. ಬಿದ್ದೇರಿಯಂಡ ಬೋಪಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.