ಮಡಿಕೇರಿ:
ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಭಾನುವಾರ ನಡೆದ ಪಂದ್ಯಗಳಲ್ಲಿ 14 ತಂಡಗಳು ಮುಂದಿನ ಹಂತ ಪ್ರವೇಶಿಸಿದವು. ಅಲ್ಲಪಂಡ ಮತ್ತು ಪಟ್ಟಡ ಹಾಗೂ ಬೊಜ್ಜಂಗಡ ಮತ್ತು ಕೂತಂಡ ನಡುವಿನ ಪಂದ್ಯಗಳು ಪಂದ್ಯಾಟದಲ್ಲಿ ಗಮನ ಸೆಳೆದವು. ಅಲ್ಲಪಂಡ ಮತ್ತು ಕೂತಂಡ ತಂಡಗಳು ತಮ್ಮ ಎದುರಾಳಿ ವಿರುದ್ಧ ಭರ್ಜರಿ ಆಟ ಪ್ರದರ್ಶಿಸಿ 6-0 ಗೋಲುಗಳ ಅಂತರದಿAದ ಗೆಲವುವಿನ ದಾಖಲೆ ಬರೆದವು.
ಮೈದಾನ 1ರಲ್ಲಿ ಅಜ್ಜೇಟ್ಟಿರ ಮತ್ತು ಪುಳ್ಳಂಗಡ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಪುಳ್ಳಂಗಡ ತಂಡ ಜಯ ಸಾಧಿಸಿತು. ಅಲ್ಲಪಂಡ ಮತ್ತು ಪಟ್ಟಡ ನಡುವಿನ ಪಂದ್ಯದಲ್ಲಿ 6-0 ಗೋಲುಗಳ ಅಂತರದಲ್ಲಿ ಅಲ್ಲಪಂಡ ತಂಡ ವಿಜಯಿ ಆದರೆ, ಕುಲ್ಲಚಂಡ ಮತ್ತು ಆಲೆಮಾಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಕುಲ್ಲಚಂಡ ತಂಡ ಜಯದನಗು ಬೀರಿತು. ಬೊಜ್ಜಂಗಡ ಮತ್ತು ಕೂತಂಡ ನಡುವಿನ ಪಂದ್ಯದಲ್ಲಿ 6-0 ಗೋಲುಗಳ ಅಂತರದಲ್ಲಿ ಕೂತಂಡ ಭರ್ಜರಿ ಗೆಲುವು ದಾಖಲಿಸಿತು. ಬೊಳಿಯಾಡಿರ ಮತ್ತು ಪೆಮ್ಮಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಪೆಮ್ಮಂಡ ತಂಡ ಜಯ ಸಾಧಿಸಿತು. ಅಮ್ಮಣಿಚಂಡ ಮತ್ತು ಬೊಳಕಾರಂಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಅಮ್ಮಣಿಚಂಡ ಗೆಲುವು ದಾಖಲಿದರೆ, ಅಜ್ಜಮಾಡ ಮತ್ತು ಕೊಟ್ಟಂಗಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಅಜ್ಜಮಾಡ ಜಯ ಸಾಧಿಸಿತು.
ಮೈದಾನ 2ರಲ್ಲಿ ಐಚೆಟ್ಟಿರ ಮತ್ತು ಕಳಕಂಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಐಚೆಟ್ಟಿರ ತಂಡ ಜಯ ಸಾಧಿಸಿತು. ನಾಳಿಯಂಡ ಮತ್ತು ತೀತಮಾಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ನಾಳಿಯಂಡ ಜಯ ಸಾಧಿಸಿದರೆ, ಕಾಳಿಮಾಡ ಮತ್ತು ಕೊಂಗೇಟಿರ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಕೊಂಗೇಟಿರ ಜಯ ಗಳಿಸಿತು. ಕಲಿಯಾಟಂಡ ಮತ್ತು ಅಮ್ಮಂಡ ನಡುವಿನ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಅಮ್ಮಂಡ ತಂಡ ಜಯಿಸಿತು. ತಾಪಂಡ ಮತ್ತು ಚೇನಂಡ ನಡುವಿನ ಪಂದ್ಯದಲ್ಲಿ 4-0 ಗೋಲು ಅಂತರದಲ್ಲಿ ಚೇನಂಡ ಗೆಲುವು ಸಾಧಿಸಿತು. ಚೋಯಮಾಡಂಡ ಮತ್ತು ಅಪ್ಪಾರಂಡ ನಡುವಿನ ಪಂದ್ಯದಲ್ಲಿ 4-1 ಗೋಲುಗಳ ಅಂತರದಲ್ಲಿ ಚೋಯಮಾಡಂಡ ಜಯ ಸಾಧಿಸಿತು. ಕೋಟೆರ ಮತ್ತು ಅಪ್ಪನೆರವಂಡ ನಡುವಿನ ಪಂದ್ಯದಲ್ಲಿ 5-1 ಗೋಲುಗಳ ಅಂತರದಲ್ಲಿ ಕೋಟೆರ ತಂಡ ಗೆಲುವು ದಾಖಲಿಸಿತು.