ಜಿಲ್ಲೆ

ಮುದ್ದಂಡ ಕಪ್ ಹಾಕಿ: 10 ತಂಡಗಳು ಮುಂದಿನ ಹಂತಕ್ಕೆ

ಮಡಿಕೇರಿ:

ಮಡಿಕೇರಿಯಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಮುದ್ದಂಡ ಕಪ್ ಹಾಕಿ ಉತ್ಸವದ ಶನಿವಾರದ ಪಂದ್ಯಗಳಲ್ಲಿ 10 ತಂಡಗಳು ಮುಂದಿನ ಹಂತ ಪ್ರವೇಶಿಸಿದವು. 2 ಪಂದ್ಯಗಳಲ್ಲಿ 4 ತಂಡಗಳ ಸಮಬಲದ ಹೋರಾಟಕ್ಕೆ 2ನೇ ಮೈದಾನ ಶನಿವಾರ ಸಾಕ್ಷಿ ಆಯಿತು. ಮಾಳೇಟಿರ (ಕೆದಮುಳ್ಳೂರು) ಮತ್ತು ಮತ್ರಂಡ ನಡುವಿನ ಪಂದ್ಯ ಮತ್ತು ಚೋಡುಮಾಡ ಮತ್ತು ಅನ್ನಾಡಿಯಂಡ ನಡುವಿನ ಪಂದ್ಯ ಸಮಬಲದಿಂದ ಕೂಡಿದ್ದ ಕಾರಣ ಟೈಬ್ರೇಕರ್‌ಗೆ ಅವಕಾಶ ಕೊಡಲಾಯಿತು. ಮತ್ರಂಡ ಮತ್ತು ಅನ್ನಾಡಿಯಂಡ ತಂಡಗಳು ಈ ಅವಕಾಶ ಬಳಸಿಕೊಂಡಿ ಮುಮದಿನ ಹಂತಕ್ಕೆ ಪ್ರವೇಶ ಪಡೆದುಕೊಂಡವು.

ಮೈದಾನ 1ರಲ್ಲಿ ಮೂಕೊಂಡ ಮತ್ತು ಕುಂಡ್ಯೋಳAಡ ಪಂದ್ಯಗಳ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಕುಂಡ್ಯೋಳAಡ ತಂಡ ಜಯ ಸಾಧಿಸಿತು. ಆದೇಂಗಡ ಮತ್ತು ನಾಪಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ನಾಪಂಡ ಗೆಲುವು ದಾಖಲಿದರೆ ಕೇಲೇಟಿರ ಮತ್ತು ಕುಪ್ಪಂಡ (ನಾಂಗಾಲ) ನಡುವಿನ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಕೇಲೇಟಿರ ತಂಡ ಜಯ ಸಾಧಿಸಿತು. ಮಾರ್ಚಂಡ ಮತ್ತು ಕೋಳೇರ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಕೋಳೇರ ತಂಡ ಜಯದ ನಗು ಬೀರಿತು. ಶಾಂತೆಯAಡ ಮತ್ತು ಅಪ್ಪಚೆಟ್ಟೋಳಂಡ ತಂಡಗಳ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಶಾಂತೆಯAಡ ಗೆಲುವು ಸಾಧಿಸಿತು. ಮನೆಯಪಂಡ ಮತ್ತು ಚೆಕ್ಕೇರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಚೆಕ್ಕೇರ ತಂಡ ಜಯ ಸಾಧಿಸಿತು.

ಮೈದಾನ 2ರಲ್ಲಿ ಮಾಳೇಟಿರ (ಕೆದಮುಳ್ಳೂರು) ಮತ್ತು ಮತ್ರಂಡ ನಡುವಿನ ಪಂದ್ಯದಲ್ಲಿ ನಿಗಧಿತ ಅವದಿಯಲ್ಲಿ ತಲಾ 2 ಗೋಲು ಬಾರಿಸಿ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ನಡೆದ ಟೈ ಬ್ರೇಕರ್‌ನಲ್ಲಿ 4-3 ಗೋಲುಗಳ ಅಂತರದಲ್ಲಿ ಮತ್ರಂಡ ತಂಡ ಜಯ ಸಾಧಿಸಿತು. ಚೋಡುಮಾಡ ಮತ್ತು ಅನ್ನಾಡಿಯಂಡ ನಡುವಿನ ಪಂದ್ಯದಲ್ಲಿ ನಿಗಧಿತ ಅವಧಿಯಲ್ಲಿ ತಲಾ 1 ಗೋಲು ಬಾರಿಸುವ ಮೂಲಕ ಸಮಬಲ ಪ್ರದರ್ಶಿದ ಹಿನ್ನೆಲೆ ನಡೆದ ಟೈ ಬ್ರೇಕರ್‌ನಲ್ಲಿ 3-2 ಗೋಲುಗಳ ಅಂತರದಲ್ಲಿ ಅನ್ನಾಡಿಯಂಡ ಗೆಲುವು ದಾಖಲಿಸಿತು. ಪರದಂಡ ಮತ್ತು ಮುಂಡ್ಯೋಳAಡ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಪರದಂಡ ತಂಡ ಜಯ ಸಾಧಿಸಿತು. ಪಾಡೆಯಂಡ ಮತ್ತು ಮೈಂದಪAಡ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಪಾಡೆಯಂಡ ಜಯ ಸಾಧಿಸಿದರೆ, ಮಲ್ಲಮಾಡ ಮತ್ತು ಐನಂಡ ನಡುವಿನ ಪಂದ್ಯದಲ್ಲಿ ಐನಂಡ 2-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು.