ಹೊಳೆನರಸೀಪುರ: ಸೃಜನಶೀಲತೆ ವೃದ್ಧಿಗೆ ಬೇಸಿಗೆ ಶಿಬಿರ ಪೂರಕ ಎಂದು ಪುರಸಭೆ ಅಧ್ಯಕ್ಷ ಎಚ್.ಕೆ. ಪ್ರಸನ್ನ ತಿಳಿಸಿದರು.ಪಟ್ಟಣದ ಸ್ನೇಹ ಸದನ ಆವರಣದಲ್ಲಿ ಸೋಶಿಯಲ್ ಕ್ಲಬ್, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆ ಸಹಯೋಗದೊಂದಿಗೆ 1ರಿಂದ 10ನೇ ತರಗತಿಯ ಮಕ್ಕಳಿಗೆ ಆಯೋಜಿಸಿರುವ ಬೇಸಿಗೆ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸ್ಥಳೀಯ ಘಟಕದ ಕಾರ್ಯದರ್ಶಿ ಕುಮುದಾ ಅವರು ಶಿಬಿರದ ಬಗ್ಗೆಪ್ರಾಸ್ತಾವಿಕವಾಗಿ ಮಾತನಾಡಿದರು.ಸ್ಕೌಟ್ಸ್ ಘಟಕ ಅಧ್ಯಕ್ಷ ಶಂಕರ ನಾರಾಯಣ ಐತಾಳ, ಉಪಾಧ್ಯಕ್ಷ ಮುರಳೀಧರ ಗುಪ್ತ, ಕೆನರಾ ಬ್ಯಾಂಕ್
ನಿವೃತ್ತ ವ್ಯವಸ್ಥಾಪಕ ಉದಯ ಭಾನು, ವರ್ತಕರಾದ ನಾಗೇಂದ್ರ ಶೆಟ್ಟಿ ಹಾಜರಿದ್ದರು.