filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (0.58264005, 0.58264005); modeInfo: ; sceneMode: 32768; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

ರಸ್ತೆ ಕಾಮಗಾರಿ ಪ್ರಗತಿ ಪರಿಶೀಲನೆ

ಎ. ಆರ್. ರಘುರಾಮ

 ಹೊಳೆನರಸೀಪುರ : ಪಟ್ಟಣದ ಬಿಎಚ್ ರಸ್ತೆಯ ವಿಸ್ತರಣಾ ಕಾಮಗಾರಿಯನ್ನು ಶಾಸಕ ಎಚ್.ಡಿ. ರೇವಣ್ಣ ಗುರುವಾರ ವೀಕ್ಷಣೆ ಮಾಡಿದರು.

ನಂತರ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 19 ಕೋಟಿ ರೂ. ವೆಚ್ಚದಲ್ಲಿ ಹಾಸನ -ಮೈಸೂರು ಮಾರ್ಗದ ಪಟ್ಟಣದ ಒಳ ರಸ್ತೆ ಯನ್ನು ಡಬಲ್ ರೋಡ್ ಆಗಿ ವಿಸ್ತರಿಸುತ್ತಿದ್ದು, ಇಂಜಿನಿಯರ್ ಮತ್ತು ಗುತ್ತಿಗೆದಾರರುಗುಣಮಟ್ಟ ಪಾಲನೆಗೆ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು. ಮೊದಲು ರಸ್ತೆಯ ಅರ್ಧ (30 ಅಡಿ) ಕಾಮಗಾರಿ ಪೂರ್ಣಮಾಡಿ ನಂತರ ಸಂಚಾರಕ್ಕೆ ಅವಕಾಶ ಮಾಡಬೇಕು.

ಉಳಿದ ಅರ್ಧ ಭಾಗದ ಕಾಮಗಾರಿ ನಂತರ ಮಾಡಬೇಕು ಎಂದು ಸೂಚಿಸಿದ್ದೇನೆ. ವಿಸ್ತರಣಾ ಸ್ಥಳ ಸ್ವಾಧೀನ ಮಾಡಿಕೊಂಡಿರುವುದಕ್ಕೆ ಸರ್ಕಾರಿ ನಿಯಮಗಳ ಅನ್ವಯ ಸೂಕ್ತ ಪರಿಹಾರ ವಿತರಿಸಿದ ನಂತರವೇ ಕಾಮಗಾರಿ ನಡೆಸಲಾಗುವುದು ಎಂದು ರೇವಣ್ಣ ತಿಳಿಸಿದರು.