ಹೊಳೆನರಸೀಪುರ : ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷದ ಪ್ರಥಮ ಬಿಎ, ಬಿಎಸ್ಸಿ ಹಾಗೂ ಬಿಕಾಂ ಕೋರ್ಸ್‌ಗಳಿಗೆ ದಾಖಲಾತಿ ಪ್ರಾರಂಭವಾಗಿದೆ ಎಂದು ಪ್ರಾಂಶುಪಾಲ ಡಾ. ಮಾದಯ್ಯ ಮಾಕನಹಳ್ಳಿ ತಿಳಿಸಿದ್ದಾರೆ.
ಉತ್ತಮವಾದ ಬೋಧನೆ, ಲೈಬ್ರರಿ, ಹಾಸ್ಟೆಲ್ ವ್ಯವಸ್ಥೆಯೊಂದಿಗೆ ಜ್ಞಾನರ್ಜನೆಗೆ ಅಗತ್ಯ ಸೌಲಭ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳ ಅನಾವರಣಕ್ಕೂ ಅವಕಾಶವಿದೆ. ತಾಲೂಕಿನ ವಿದ್ಯಾರ್ಥಿನಿಯರು ಕಾಲೇಜಿಗೆ ದಾಖಲಾಗುವ ಮೂಲಕ ಸದುಪಯೋಗ ಪಡೆಯಬಹುದು ಎಂದು ಪ್ರಾಂಶುಪಾಲ ಡಾ. ಮಾದಯ್ಯ ಮಾಕನಹಳ್ಳಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಇತಿಹಾಸ, ರಾಜ್ಯ ಶಾಸ್ತ್ರ, ಕನ್ನಡ, ಅರ್ಥ ಶಾಸ್ತ್ರ, ಅಂಗ್ಲಭಾಷೆ, ಸಮಾಜ ಶಾಸ್ತ್ರ, ಮನ ಶಾಸ್ತ್ರ, ಪತ್ರಿಕೋದ್ಯಮ ಹಾಗೂ ಅಪರಾಧಶಾಸ್ತ್ರ ಅಧ್ಯಯನಕ್ಕೆ ಅವಕಾಶವಿದೆ.
ವಾಣಿಜ್ಯ ವಿಭಾಗದಲ್ಲಿ ಬಿಕಾಂ, ಬಿಬಿಎ, ವಿಜ್ಞಾನ ವಿಭಾಗದಲ್ಲಿ ಪಿಸಿಎಂಸಿ, ಕೋರ್ಸ್‌ಗಳು ಲಭ್ಯವಿದೆ. ಪದವಿ ವ್ಯಾಸಂಗ ಮಾಡಿದವರಿಗೆ ಎಂಎ ಕನ್ನಡ, ಎಂಎ ಅರ್ಥಶಾಸ್ತ್ರ, ಹಾಗೂ ಎಂಕಾ ಶಿಕ್ಷಣದ ಸೌಲಭ್ಯವೂ ಇದೆ ಎಂದು ಅವರು ವಿವರಿಸಿದರು.