ಜಿಲ್ಲೆ

: ನಶೆಮುಕ್ತ ಕರ್ನಾಟಕ ನಿರ್ಮಾಣ ಮಾಡೋಣ

ಎ. ಆರ್. ರಘುರಾಮ
ಹೊಳೆನರಸೀಪುರ: ನಶೆಮುಕ್ತ ಕರ್ನಾಟಕ ನಿರ್ಮಾಣ ಮಾಡೋಣ ಹಾಗೂ ದೇಶವನ್ನು ಸದೃಢಗೊಳಿಸಲು ಸಹಕರಿಸೋಣ. ನಮಗೆ ಅನಾರೋಗ್ಯ ಉಂಟುಮಾಡುವ ಮಾದಕ ವಸ್ತುಗಳಿಂದ ದೂರ ಇರೋಣ ಎಂದು  ತಾಲ್ಲೂಕು ವಿವಿಧೊದ್ದೇಶ ಪುನರ್ವಸತಿ ಕೇಂದ್ರದ ಕಾರ್ಯಕರ್ತ ಕೆ ಬಿ ಹರೀಶ್ ಅಭಿಪ್ರಾಯ ಪಟ್ಟರು.
  ತಾಲ್ಲೂಕಿನ ದೊಡ್ಡಕಾಡನೂರು ಗ್ರಾಮದಲ್ಲಿ ಮಂಗಳವಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ನವದೆಹಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಪೋಲೀಸ್ ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಮದ್ಯ ವ್ಯಸನ ಮುಕ್ತಿ ಕೇಂದ್ರ ಹಾಸನ  ಮತ್ತು ಹೊಳೆನರಸೀಪುರ ತಾಲ್ಲೂಕು ವಿವಿಧೋದ್ದೇಶ ಪುನರ್ವಸತಿ ಕೇಂದ್ರ  ಮತ್ತು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ದೊಡ್ಡಕಾಡನೂರು ಇವರ ಸಂಯುಕ್ತ ಆಶ್ರಯದಲ್ಲಿ ನಶಾ ಮುಕ್ತ ಭಾರತ ಅಭಿಯಾನ ಯೋಜನೆಯಡಿ ಮದ್ಯ ಮತ್ತು ಮಾದಕ ವಸ್ತುಗಳು, ಅವುಗಳ ದುರ್ಬಳಕೆ ಮತ್ತು ದುಷ್ಪರಿಣಾಮಗಳು ಹಾಗೂ ಪುನರ್ವಸತಿ ಕುರಿತು ಜಾಗೃತಿ, ಜಾತಾ ಹಾಗೂ ಪ್ರತಿಜ್ಞಾವಿಧಿ ಬೋಧನೆ ಕಾರ್ಯಕ್ರಮ ನಡೆಯಿತು.
   ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಇವರು ಸಮಾಜದ ಸ್ವಸ್ಥವನ್ನು ಕೆಡಿಸುವ ಮಾದಕ ವ್ಯಸನದಿಂದ ದೂರ ಇರಿಸೋಣ. ನಮ್ಮ ವಿದ್ಯಾಭ್ಯಾಸಕ್ಕೆ ಮಾರಕವಾಗುವ ಮಾದಕ ವ್ಯಸನಕ್ಕೆ ಬಲಿಯಾಗದಿರೋಣ, ಮಾದಕ ವ್ಯಸನವನ್ನು ತ್ಯಜಿಸಿ, ಕುಟುಂಬ, ಸಮುದಾಯ, ಸಮಾಜ ಹಾಗೂ ದೇಶದ ಸ್ವಸ್ಥö್ಯವನ್ನು ಕಾಪಾಡೋಣ, ನಮ್ಮ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಗೆ ತಡೆಯಾಗಿರುವ ಮಾದಕ ವ್ಯಸನದಿಂದ ಮುಕ್ತರಾಗೋಣ ಎಂದು ತಿಳಿಸಿದರು. ನಂತರ ಪ್ರತಿಜ್ಞಾವಿಧಿ ಬೊಧಿಸಿದರು.