ಜಿಲ್ಲೆ

ಮಡಿಕೇರಿ ಕ್ಷೇತ್ರಕ್ಕೆ ಎಚ್.ಎಂ.ಸೋಮಪ್ಪ ಅಭ್ಯರ್ಥಿ: ಬಿ.ಅಮ್ಜದ್

reportermys

ಮಡಿಕೇರಿ: ಭಾರತ್ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಎಚ್.ಎಂ.ಸೋಮಪ್ಪರವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಭಾರತ್ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಹ ಕಾರ್ಯದರ್ಶಿ ಹಾಗೂ ಜಿಲ್ಲಾ ವಕ್ತಾರ ಬಿ.ಅಮ್ಜದ್ ತಿಳಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ೭ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಮಡಿಕೇರಿ, ಮೂಡಿಗೆರೆ, ಕೂಡ್ಲಗಿ, ಶಿರ, ಜೀವರ್ಗಿ, ಆಳಂದ, ಕೆಜಿಎಫ್ ಕ್ಷೇತ್ರದಿಂದ ಅಭ್ಯರ್ಥಿಗಳು ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಜಿಲ್ಲಾ ಸಮಿತಿಗಳು ರಾಜ್ಯ ಸಮಿತಿಗೆ ನೀಡಿದ ಶಿಫಾರಸಿನ ಮೇರೆಗೆ ಅಭ್ಯರ್ಥಿಗಳ ಆಯ್ಕೆ ನಡೆದಿದೆ. ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.


ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಎಚ್.ಎಂ.ಸೋಮಪ್ಪ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುನಿಲ್, ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ಶಬಾನಾ, ಸಹ ಕಾರ್ಯದರ್ಶಿಗಳಾದ ರಮೇಶ್, ರಫಿಕ್ ನವಲಗುಂದ ಉಪಸ್ಥಿತರಿದ್ದರು.