ಜಿಲ್ಲೆ

ಅಸಮರ್ಥ ಗೃಹಮಂತ್ರಿಯನ್ನು ಕೂಡಲೇ ವಜಾಗೊಳಿಸಿ : ಡಾ.ಸುಧಾ ಹಾಲಕಾಯಿ ಆಗ್ರಹ

ಬಾಬುರಾವ ಯಡ್ರಾಮಿ

*ಲೈಂಗಿಕ ಕಿರುಕುಳ ಪ್ರಕರಣ: ಗೃಹಸಚಿವ ಜಿ. ಪರಮೇಶ್ವರ್ ಹೇಳಿಕೆಗೆ ಬಿಜೆಪಿ ತೀವ್ರ ಖಂಡನೆ*

ಕಲಬುರಗಿ: : ಗೃಹಸಚಿವ ಜಿ ಪರಮೇಶ್ವರ್ ಅವರ ಹೇಳಿಕೆಯನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಖಾತೆ ವಹಸ ನಂತರ ಕಳೆದ ಎರುಡು ವರ್ಷಗಳಲ್ಲಿ ಪದ ಪದೇ ಅವರ ಹೇಳಿಕೆಯನ್ನು ನೋಡಿದಾಗ ಒಬ್ಬ ಅಸಮರ್ಥ, ಜತೆಗೆ ಒಂದು ರೀತಿಯ ಸಂವೇದನಾರಹಿತ, ಗೃಹಮಂತ್ರಿಗಳಾಗಿ ಕಂಡು ಬರುತ್ತಿದ್ದಾರೆ. ಅವರ ನಿನ್ನೆಯ ಹೇಳಿಕೆಯಂತೂ ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು ಎಂದು ಬಿಜೆಪಿ ರಾಜ್ಯ ವಕ್ತಾರರಾದ ಡಾ.ಸುಧಾ ಹಾಲಕಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳೆಯರ ಮೇಲೆ ಅವ್ಯಾಹತವಾದ ನಿರಂತರ ದೌರ್ಜನ್ಯ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ- ಈ ಎಲ್ಲ ಸಂಗತಿಗಳ ಬಗ್ಗೆ ಅವರ ಹೇಳಿಕೆ ನಿಕ್ಕೂ ಒಬ್ಬ ಗೃಹ ಮಂತ್ರಿಗೆ ಶೋಭೆ ತರುವಂಥದ್ದಲ್ಲ. ನ್ಯಾಷನಲ್ ಕ್ರೈಮ್ ಬ್ಯೂರೋ ತನ್ನ ವರದಿಯಲ್ಲಿ ಕರ್ನಾಟಕದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಶೇ 60ಕ್ಕಿಂತ ಜಾಸ್ತಿ ಆಗಿರುವುದನ್ನು ಉಲ್ಲೇಖಿಸಿದೆ ಎಂದು ತಿಳಿಸಿದ್ದಾರೆ.

ಒಬ್ಬ ಅಸಮರ್ಥ ಗೃಹಮಂತ್ರಿಯಾಗಿ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ನಿರ್ವಹಣೆ ಮಾಡಬೇಕಾದ ಪರಮೇಶ್ವರ್ ಅವರು ಈ ರೀತಿ ಕ್ಷುಲ್ಲಕ ಹೇಳಿಕೆ ಕೊಡುವ ಮೂಲಕ, ಪರಿಸ್ಥಿತಿಯನ್ನು ಸರಿಯಾಗಿ ಅವಲೋಕನ ಮಾಡದೆ, ಕರ್ನಾಟಕದಲ್ಲಿ ಕ್ರಿಮಿನಲ್ ಗಳು, ಜಿಹಾದಿಗಳು ಹಾಗೂ ಮಿಕ್ಕ ಕೋಮು ಶಕ್ತಿಗಳ ಧ್ರುವೀಕರಣಕ್ಕೆ ಅವಕಾಶ ಮಾಡಿಕೊಡುತ್ತಿರುವುದು ಕಂಡುಬರುತ್ತಿದೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಸರಕಾರ ಬಂದ ನಂತರ ಈ ರೀತಿಯ ತಥಾಕಥಿತ ವ್ಯಕ್ತಿಗಳಿಗೆ ಒಂದು ರೀತಿ ಸ್ವರ್ಗ ಸಿಕ್ಕಿದ ಹಾಗಾಗಿದೆ. ಸಾಮಾನ್ಯ ಜನರ ನಂಬಿಕೆ ಕಾಂಗ್ರೆಸ್ ಸರಕಾರ ಯಾವಾಗೆಲ್ಲ ಬರುತ್ತೋ ಆವಾಗೆಲ್ಲ ಈ ಕ್ರಿಮಿನಲ್‌ಗಳು, ಲೂಟಿಕೋರರು, ಭ್ರಷ್ಟರು ಹೆಚ್ಚಾಗುತ್ತಿದ್ದಾರೆ. ಈ ರೀತಿಯ ಕ್ರಿಮಿನಲ್ ಚಟುವಟಿಕೆಗಳಿಗೆ ಇಂಬುಕೊಡುವುದು ಹೆಚ್ಚಾಗುತ್ತಿದೆ. ಒಂದು ರಾಜಕೀಯ ಪಕ್ಷದ, ಸರಕಾರದ ರಾಹಜಕೀಯ ಸಿದ್ಧಾಂತವೇ ಇದು ಎನ್ನುವ ರೀತಿಯಲ್ಲಿ ನಡೆಯುತ್ತಿದೆ.

ಆದ್ದರಿಂದ ಮಾನ್ಯ ಗೃಹಸಚಿವ ಡಾ ಜಿ. ಪರಮೇಶ್ವರ್ ಅವರು ನೀಡಿದ ಹೇಳಿಕೆಗಾಗಿ ಅವರು ರಾಜ್ಯದ ಜನತೆಯ ಕ್ಷಮಾಪಣೆ ಕೇಳಬೇಕು ಎಂದು‌ ಡಾ.ಹಾಲಕಾಯಿ ಆಗ್ರಹಿಸಿದ್ದಾರೆ.

ಬಿಜೆಪಿ ಇದನ್ನು ಅತ್ಯುಗ್ರವಾಗಿ ಖಂಡಿಸುತ್ತದೆ. ಈ ಗೃಹಮಂತ್ರಿಗಳು ರಾಜ್ಯದ ಕಾನೂನು ಸುವ್ಯವಸ್ಥೆ ಪಾಲನೆ ಮಾಡುವಲ್ಲಿ ಅಸಮರ್ಥರಾಗಿರುವುದರಿಂದ ಮಾನ್ಯ ಮುಖ್ಯಮಂತ್ರಿಗಳು ಈ ಕೂಡಲೇ ಅವರನ್ನು ಬದಲಾಯಿಸಿ ಉತ್ತಮ, ಸಮರ್ಥ ಗೃಹಮಂತ್ರಿಗಳನ್ನು ನೇಮಿಸುವುದು ಅಗತ್ಯ ಎಂದು ಒತ್ತಾಯಿಸಿದ್ದಾರೆ..

ಬೇರೆ ಬೇರೆ ರಾಜ್ಯಗಳಲ್ಲಿ ಕೂಡ ಇಂತಹ ಪರಿಸ್ಥಿತಿಗಳು ಉದ್ಭವವಾದಾಗ ಗೃಹ ಮಂತ್ರಿಗಳು ಸಮರ್ಥವಾಗಿ, ಸಂವೇದನಾಶೀಲರಾಗಿ ವರ್ತಿಸಿದ್ದಾರೆ. ಆದರೆ ಕರ್ನಾಟಕದ ಗೃಹಮಂತ್ರಿಗಳು ತಮ್ಮ ಅಸಮರ್ಥತೆಯಿಂದಲೇ ಕುಖ್ಯಾತಿ ಗಳಿಸಿದ್ದಾರೆ. ಆದ್ದರಿಂದ ಅವರನ್ನು ಕೂಡಲೇ ಬದಲಾಯಿಸಬೇಕು ಎಂದು ಭಾರತೀಯ ಜನತಾ ಪಕ್ಷ ಬಲವಾಗಿ ಆಗ್ರಹಿಸುತ್ತದೆ.

ಬೆಂಗಳೂರಿನ ಸದ್ದುಗುಂಟೆಪಾಳ್ಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ವ್ಯಾಪಕ ಸುದ್ದಿಯಾಗುತ್ತಿದ್ದಂತೆ, ಗೃಹಸಚಿವರು ಪ್ರತಿಕ್ರಿಯಿಸಿ, ಬೆಂಗಳೂರು ದೊಡ್ಡ ನಗರ, ಅಲ್ಲೊಂದು-ಇಲ್ಲೊಂದು ಲೈಂಗಿಕ ಕಿರುಕುಳ ಘಟನೆಗಳು ಆಗುತ್ತವೆ ಎಂದು ಉಡಾಫೆಯ ಹೇಳಿಕೆ ನೀಡಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.