ಬೆಳಗಾವಿ: ಬೆಳಗಾವಿ ಕಲಾವಿದರೇ ಅಭಿನಯಿಸಿ, ನಿರ್ದೇಶಿಸಿದ ‘ಅಸ್ತಿತ್ವ ಈ ಪಯಣ ಯಾರಿಗಾಗಿ?’ ಎಂಬ ಚಿತ್ರವನ್ನು ಬೆಳಗಾವಿ ನಗರದ ಕೋನವಾಳ ಗಲ್ಲಿಯಲ್ಲಿರುವ ಲೋಕಮಾನ್ಯ ರಂಗ ಮಂದಿರದಲ್ಲಿ ಯಶಸ್ವಿ ಮೂರು ಪ್ರದರ್ಶನಗೊಂಡಿತು.
ಬೆಳಗಾವಿಯ ಕ್ರಿಯಾಶೀಲ ನಿರ್ದೇಶಕ ಡಿ ಮಂಜುನಾಥ ಅವರು ನಿರ್ದೇಶಿಸಿರುವ ಅಸ್ತಿತ್ವ ಈ ಪಯಣ ಯಾರಿಗಾಗಿ ಎಂಬ ಸಾಮಾಜಿಕ ಸಂದೇಶವುಳ್ಳ ಚಿತ್ರ ಪ್ರದರ್ಶನಗೊಂಡಿತು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರವನ್ನು ವೀಕ್ಷಿಸಿದರು. ಒಂದೇ ದಿನ ಮೂರು ಪ್ರದರ್ಶನಗಳು ಕಂಡವು.
ಸ್ಥಳೀಯ ಕಲಾವಿದರು ಅಭಿನಯಿಸಿರುವ ಈ ಚಿತ್ರ ಬೆಳಗಾವಿಯ ವಿವಿಧ ಕಡೆಗಳಲ್ಲಿ ಚಿತ್ರೀಕರಣವಾಗಿದೆ. ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಹಲವು ದಿನಗಳ ಕಾಲ ಈ ಚಿತ್ರೀಕರಣಗೊಂಡಿದೆ. ಯುವ ಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ನಿರ್ದೇಶಕ ಡಿ ಮಂಜುನಾಥ ಮಾತನಾಡಿ, ವಿದ್ಯಾರ್ಥಿಗಳು ಡ್ರಗ್ಸ್ ಸೇರಿದಂತೆ ವಿವಿಧ ದುಚ್ಟಗಳ ದಾಸರಾಗುತ್ತಿದ್ದು, ಇದು ಇವರ ಕುಟುಂಬದವರ ಮೇಲೂ ದುಷ್ಪರಿಣಾಮ ಬೀರುತ್ತಿದೆ. ದುಶ್ಚಟಗಳಿಗೆ ಅಂಟಿಕೊಂಡರೆ ಇಡೀ ಕುಟುಂಬವೇ ಸರ್ವನಾಶ ಆಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಇಂಥ ದುಶ್ಚಟಗಳಿಗೆ ಅಂಟಿಕೊಳ್ಳದೇ ಸುಖಿ ಜೀವನ ನಡೆಸಬೇಕೆಂಬ ಸಾಮಾಜಿಕ ಸಂದೇಶವನ್ನು ಸಆರುವ ಚಿತ್ರ ಇದ್ದಾಗಿದ್ದು, ಕುಟುಂಬ ಸಮೇತರಾಗಿ ನೋಡುವಂಥ ಚಿತ್ರ ನಿರ್ಮಿಸಲಾಗಿದೆ ಎಂದು ಹೇಳಿದರು.
ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ನ ಮ್ಯಾನೇಜರ್ ಅಮ್ಜದ್ ಜಮಾದಾರ ಹಾಗೂ ಈರಣ್ಣ ಮಾತನಾಡಿ, ಅಸ್ತಿತ್ವ ಎಂಬ ಚಿತ್ರದಲ್ಲಿ ಯುವ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಸಾಮಾಜಿಕ ಸಂದೇಶ ಸಾರುವ ಇಂಥ ಚಿತ್ರಗಳನ್ನು ಜನರು ವೀಕ್ಷಿಸಬೇಕು.ಸಮಾಜದಲ್ಲಿಯ ದುಶ್ಚಟಗಳನ್ನು ನಿವಾರಿಸಲು ಈ ಚಿತ್ರ ಮಾದರಿಯಾಗಿದೆ ಎಂದರು.
ಮುಖ್ಯ ಪಾತ್ರದಲ್ಲಿ ಭೋಜರಾಜ, ವಿನಾಯಕ, ನಟಿ ಪೂರ್ಣಿಮಾ ಕಾಜಗಾರ ನಟಿಸಿದ್ದಾರೆ. ಗಗನದೀಪ ಕುರಳೆ ಸಂಗೀತ ನಿರ್ದೇಶಕರಾಗಿದ್ದು, ಛಾಯಾಗ್ರಾಹಣ ಅಶೋಕ ಜಿಡಗಿ, ಸಂಕಲನ ಮೃತ್ಯುಂಜಯ ಬಿರಾದಾರ, ಡಿ. ಮಂಜುನಾಥ ರಚಿಸಿ ನಿರ್ದೇಶಿಸಿದ್ದಾರೆ.
ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ಅಧ್ಯಕ್ಷೆ ಮಂಗಳಾ ಮಠದ, ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಮಹಾನ್ ಹುತಾತ್ಮ ಚಿತ್ರದ ನಟ ಅಕ್ಷಯ ಚಂದ್ರಶೇಖರ, ಶ್ರೀ ಬಸವೇಶ್ವರ ಸೊಸೈಟಿ ಅಧ್ಯಕ್ಷ ರಮೇಶ ಕಳಸಣ್ಣವರ, ಉಪಾಧ್ಯಕ್ಷ ಸತೀಶ ಪಾಟೀಲ, ಸುರೇಖಾ ಹುಬ್ಬಳ್ಳಿ, ರಾಜೇಶ ಕೊಲ್ಲಿಮಠ, ಆನಂದ ಹಂಪಣ್ಣವರ, ಕೇಶವ ಬಡಿಗೇರ, ಗಗನ ನಾಶಿಪುಡಿ ಸೇರಿದಂತೆ ಇತರರು ಇದ್ದರು.
ಫೋಟೊ:
ಬೆಳಗಾವಿ: ನಗರದ ಲೋಕಮಾನ್ಯ ರಂಗಮಂದಿರದಲ್ಲಿ ‘ಅಸ್ತಿತ್ವ ಈ ಪಯಣ ಯಾರಿಗಾಗಿ?’ ಚಿತ್ರ ಪ್ರದರ್ಶನಗೊಂಡಾಗ ಕಲಾವಿದರು ಸಂಭ್ರಮಿಸಿದರು.